Gl
ಧಾರ್ಮಿಕ

ಮಲ್ಪೆ ಕಡಲಲ್ಲಿ ತೇಲಿ ಬಂತೇ ಶ್ರೀಕೃಷ್ಣನ ವಿಗ್ರಹ? ಕಡಲಲ್ಲೇ ದೊರಕಿದ ಉಡುಪಿ ಕೃಷ್ಣನಂತೆ ಇದೂ ಎಂಬ ವಿಶ್ಲೇಷಣೆ ಸುಳ್ಳಾಯಿತೇ?

GL

ಈ ಸುದ್ದಿಯನ್ನು ಶೇರ್ ಮಾಡಿ

ಉಡುಪಿ: ಮಲ್ಪೆ ಕಡಲ ತೀರದಲ್ಲಿ ಕೃಷ್ಣನ ವಿಗ್ರಹ ತೇಲಿ ಬಂದು ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

core technologies

ಭಾನುವಾರ ಕೃಷ್ಣಮಠದಲ್ಲಿ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇದ್ದು, ಸುಮಾರು 18 ಬಸ್ಸುಗಳಲ್ಲಿ ಇಸ್ಕಾನ್ ಅನುಯಾಯಿಗಳು ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕಡಲಲ್ಲಿ ತೇಲಿ ಬಂದ ವಿಗ್ರಹವೊಂದು ಎಲ್ಲರ ಗಮನ ಸೆಳೆಯಿತು.

ಅಲ್ಲಿ ಸೇರಿದ್ದ ಸಾವಿರಾರು ಮಂದಿ ಆ ವಿಗ್ರಹವನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದರು. ಉಡುಪಿಯ ಕೃಷ್ಣ ದೇವರು ಕೂಡ ಕಡಲಲ್ಲೇ ಲಭ್ಯವಾದ ಕಾರಣ, ಭಾವುಕ ಭಕ್ತರು ಅದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಕುಣಿದು ಸಂಭ್ರಮಿಸಿದರು. ಅಲ್ಲಿ ಸೇರಿದ್ದ ಸಾವಿರಾರು ಇಸ್ಕಾನ್ ಭಕ್ತರು ಆ ವಿಗ್ರಹವನ್ನು ಕೃಷ್ಣನೆಂದೇ ಭಾವಿಸಿ ಅಲ್ಲಿಂದ ಕೊಂಡೊಯ್ದರು. ಆದರೆ ಮೇಲ್ನೋಟಕ್ಕೆ ಇದು ಕರಾವಳಿ ಭಾಗದ ದೇಗುಲಗಳ ಪ್ರವೇಶ ದ್ವಾರದ ಬಳಿ ಇರುವ ಜಯ- ವಿಜಯರ ವಿಗ್ರಹ ಇದಾಗಿರಬಹುದು ಎಂಬ ವಿಶ್ಲೇಷಣೆಗಳೂ ಕೇಳಿಬಂದಿವೆ.

ದೇವಾಲಯದಲ್ಲಿ ಭಿನ್ನಗೊಂಡ ವಿಗ್ರಹಗಳನ್ನು ಸಮುದ್ರಕ್ಕೆ ಮುಳುಗಿಸಿ ಬಿಡುವ ಪರಿಪಾಠ ಇದೆ. ಈ ರೀತಿ ಮುಳುಗಿಸಿ ಬಿಟ್ಟ ಜಯ- ವಿಜಯರ ವಿಗ್ರಹವೇ ತೇಲಿ ಬಂದು ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ. ಇದು ಕಡಲಲ್ಲಿ ತೇಲಿ ಬಂದ ಕೃಷ್ಣನ ವಿಗ್ರಹ ಎಂದು ಎಲ್ಲರೂ ಸಂಭ್ರಮಿಸಿ ಕುಣಿಯುವಂತಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts