ಪುತ್ತೂರು: ಹಿಂದು ಜಾಗರಣ ವೇದಿಕೆಯ ಪುರುಷರಕಟ್ಟೆ ಶಿವಾಜಿ ಶಾಖೆ ಸಾರಥ್ಯದಲ್ಲಿ ಇಂದು (ಡಿ. 20) ಸಂಜೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗದಲ್ಲಿ ದುರ್ಗಾ ಪೂಜೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.

ಸಂಜೆ 6ಕ್ಕೆ ದುರ್ಗಾ ಪೂಜೆ ಆರಂಭಗೊಳ್ಳಲಿದ್ದು, ಪುರೋಹಿತ ನಾರಾಯಣ ಐತಾಳ್ ನರಿಮೊಗರು ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಪುರುಷರಕಟ್ಟೆ ದೇವಿನಗರ ಶ್ರೀ ವನದುರ್ಗಾಂಬಿಕಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 9ರಿಂದ ಅನ್ನಸಂತರ್ಪಣೆ ಜರುಗಲಿದೆ.
ಪುತ್ತೂರು ಶ್ರೀ ರಾಮ ಕನ್’ಸ್ಟ್ರಕ್ಷನ್ ಮಾಲಕ, ಸಿವಿಲ್ ಇಂಜಿನೀಯರ್ ಪ್ರಸನ್ನ ಎನ್. ಭಟ್ ಪಂಚವಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಅವಿನಾಶ್ ಕೊಂಡಕಿರಿ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಬಂಟ್ವಾಳ ಸೇವಾ ಜಾಗರಣ ಹಿಂದೂ ಮುಖಂಡ ಜಗದೀಶ್ ನೆತ್ತರಕೆರೆ, ತ್ಯಾಗರಾಜನಗರ ಹಿಂದೂ ಜಾಗರಣ ವೇದಿಕೆ ಮುಖಂಡ ಅಶೋಕ ತ್ಯಾಗರಾಜನಗರ ಅತಿಥಿಗಳಾಗಿರುವರು. ಇದೇ ಸಂದರ್ಭ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗನ್ನಾಥ ಎಸ್. ಶಾಂತಿಗೋಡು ಹಾಗೂ ನಿವೃತ್ತ ಬಿ.ಎಸ್.ಎಫ್. ಯೋಧ ಸುರೇಶ್ ರೈ ಓಂಕಾರ ಲೇಔಟ್ ಅವರನ್ನು ಸನ್ಮಾನಿಸಲಾಗುವುದು.
ಇದೇ ಸಂದರ್ಭ ಕುಸಲ್ದ ಕುರ್ಲರಿ ನಾನ್ ಸ್ಟಾಪ್ ಕಾಮಿಡಿ ಶೋ ಆಯೋಜಿಸಲಾಗಿದೆ. ನಮ್ಮ ಟಿವಿಯ ಬಲೇ ತೆಲಿಪಾಲೆ ಹಾಗೂ ವಿ4 ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ನಲ್ಲಿ ಪ್ರಶಸ್ತಿ ವಿಜೇತ ತಂಡ ಹಾಗೂ ಬಲೇ ತೆಲಿಪಾಲೆ ಸೀಸನ್ 11ರಲ್ಲಿ ಸತತ ಮೂರು ಬಾರಿ ಪ್ರಥಮ ಬಹುಮಾನ ಪಡೆದ ಕಲಾಶ್ರೀ ಕುಡ್ಲ ತಂಡ ಈ ಶೋ ನಡೆಸಿಕೊಡಲಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಹಾಸ್ಯ, ಹಾಡು, ಮಿಮಿಕ್ರಿಗಳ ರಸದೌತಣ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.



























