ಪುತ್ತೂರು: ಆರ್ಯಾಪು ಗ್ರಾಮದ ಗ್ರಾಮ ದೇವಸ್ಥಾನವಾದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಶುಕ್ರವಾರ ಗೊನೆ ಮುಹೂರ್ತ ಹಾಗೂ ಬಲ್ಲೇರಿ ಮಲೆ ಯಾತ್ರೆ ಜರುಗಿತು.
ದೇವಸ್ಥಾನ ಸಮೀಪದ ವೆಂಕಪ್ಪ ಗೌಡ ಕಾಣಿಕೆ ಅವರ ತೋಟದಿಂದ ಗೊನೆ ಕಡಿದು, ದೇವಸ್ಥಾನಕ್ಕೆ ತರಲಾಯಿತು.
ಬಳಿಕ ವರ್ಷಂಪ್ರತಿಯಂತೆ ಬಲ್ಲೇರಿ ಮಲೆ ಯಾತ್ರೆ ಕೈಗೊಳ್ಳಲಾಯಿತು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಮೂಲ ಕ್ಷೇತ್ರವಾದ ಬಲ್ಲೇರಿ ಮಲೆಯಲ್ಲಿ ಪೂಜೆ ನಡೆದು, ಮೂಲಮೃತ್ತಿಕೆಯನ್ನು ತರಲಾಯಿತು.
ಅರ್ಚಕ ಸಂದೀಪ್ ಕಾರಂತ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಜರುಗಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಸದಸ್ಯರು, ಊರಿನ ಪ್ರಮುಖರು ಉಪಸ್ಥಿತರಿದ್ದರು.



























