ಧಾರ್ಮಿಕ

ದೇಗುಲ ಪ್ರವೇಶಿಸುವುದಿಲ್ಲ ಎಂದ ಮಿಲಿಟರಿ ಅಧಿಕಾರಿಯ ಅಮಾನತು! ಅಶಿಸ್ತಿನ ವರ್ತನೆ ಎಂದ ಸುಪ್ರಿಂ!

GL

ಈ ಸುದ್ದಿಯನ್ನು ಶೇರ್ ಮಾಡಿ

ಮೇಲಾಧಿಕಾರಿಗಳ ಆದೇಶದ ಹೊರತಾಗಿಯೂ ತನ್ನ ಧಾರ್ಮಿಕ ಹಿನ್ನೆಲೆಯನ್ನು ಮುಂದಿಟ್ಟು ತಾನು ದೇಗುಲ ಹಾಗೂ ಗುರುದ್ವಾರವನ್ನು ಪ್ರವೇಶಿಸುವುದಿಲ್ಲ ಎಂದು ಸೇನಾ ನಿಯಮ ಉಲ್ಲಂಘಿಸಿದ ಕ್ರಿಶ್ಚಿಯನ್ ಸಮುದಾಯ ಮಿಲಿಟರಿ ಅಧಿಕಾರಿಯ ಅಮಾನತು ಆದೇಶವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವೂ ಎತ್ತಿ ಹಿಡಿದಿದೆ. ಈ ಆದೇಶ ನೀಡುವ ವೇಳೆ ನ್ಯಾಯಾಲಯವೂ ಇಂತಹ ಅಧಿಕಾರಿಗಳು ಮಿಲಿಟರಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಅರ್ಹರಲ್ಲ ಎಂದು ಹೇಳಿದೆ.

core technologies

3ನೇ ಅಶ್ವದಳ ರೆಜಿಮೆಂಟ್‌ನಲ್ಲಿ ಲೆಫ್ಟಿನೆಂಟ್ ಆಗಿದ್ದ ಸ್ಯಾಮ್ಯುಯೆಲ್ ಕಮಲೇಶನ್ ಅವರಿಗೆ ಪೂಜಾ ಕಾರ್ಯಕ್ಕಾಗಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುವಂತೆ ಹಿರಿಯ ಅಧಿಕಾರಿಯೊಬ್ಬರು ಆದೇಶಿಸಿದ್ದರು. ಆದರೆ ತಮ್ಮ ಧಾರ್ಮಿಕ ಹಿನ್ನೆಲೆಯ ಕಾರಣ ನೀಡಿ ಈ ಆದೇಶವನ್ನು ಪಾಲಿಸುವುದಕ್ಕೆ ಅವರು ನಿರಾಕರಿಸಿದ್ದರು. ಹೀಗೆ ಮಾಡುವುದರಿಂದ ತನ್ನ ಕ್ರೈಸ್ತನೋರ್ವನೇ ದೇವನು ಎಂಬ ಏಕದೇವತಾ ನಂಬಿಕೆಯ ಉಲ್ಲಂಘನೆಯಾಗುವುದು ಎಂದು ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಮಾನತು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್ ಕೂಡ ಇವರ ಅಮಾನತು ಆದೇಶವನ್ನು ಎತ್ತಿ ಹಿಡಿದಿತ್ತು.

akshaya college

ಕಾನೂನುಬದ್ಧ ಮಿಲಿಟರಿ ಆದೇಶವನ್ನು ಕಡೆಗಣಿಸಿ ಅದಕ್ಕಿಂತಲೂ ಮೇಲೆ ಧರ್ಮವನ್ನು ಇಡುವುದು ಒಂದು ಸ್ಪಷ್ಟವಾದ ಅಶಿಸ್ತಿನ ವರ್ತನೆ ಎಂದು ಈ ಆದೇಶದ ವೇಳೆ ನ್ಯಾಯಾಲಯ ಹೇಳಿತ್ತು. ಇದಾದ ನಂತರ ಕಮಲೇಶನ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಹೈಕೋರ್ಟ್ ಆದೇಶದ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಬಯಸುವುದಿಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್ ಅತ್ಯಂತ ಘೋರ ಅಶಿಸ್ತಿನ ವರ್ತನೆ ಎಂದು ಹೇಳಿತ್ತು.

ಈ ವೇಳೆ ಕಮಲೇಶನ್ ಅವರು ತಾನು ದೇಗುಲ ಹಾಗೂ ಗುರುದ್ವಾರಗಳಲ್ಲಿ ಸಮಾರಂಭಗಳಿದ್ದ ಧಾರ್ಮಿಕ ಸಮಾರಂಭಗಳಿದ್ದಾಗ ಮಾತ್ರ ಅಲ್ಲಿಗೆ ಹೋಗುವುದಕ್ಕೆ ನಿರಾಕರಿಸಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಬಗಾಚಿ, ಕ್ರಿಶ್ಚಿಯನ್ ಸಮುದಾಯದ ನಂಬಿಕೆಯ ಪ್ರಕಾರ, ಮತ್ತೊಂದು ಧಾರ್ಮಿಕ ಸ್ಥಳಕ್ಕೆ ಹೋಗುವುದನ್ನು ಎಲ್ಲಿ ನಿಷೇಧಿಸಲಾಗಿದೆ ಎಂದು ಕಮಲೇಷನ್ ಅವರಿಗೆ ಮರುಪ್ರಶ್ನೆ ಮಾಡಿದರು.

ಬಹುಶಃ ನೀವು 100 ವಿಚಾರಗಳಲ್ಲಿ ಅತ್ಯುತ್ತಮರಾಗಿರಬಹುದು. ಆದರೆ ನೀವು ಜಾತ್ಯಾತೀತವಾದವನ್ನು ಸದಾ ಎತ್ತಿ ಹಿಡಿಯುವ ಧರ್ಮಾತೀತವಾದ ಚಿಂತನೆಗೆ ಹೆಸರಾದ ಎಲ್ಲರನ್ನು ಒಂದು ಎಂಬಂತೆ ಕಾಣುವ ಭಾರತೀಯ ಸೇನೆಗೆ ಖಂಡಿತವಾಗಿಯೂ ಅರ್ಹರಲ್ಲ, ನೀವು ನಿಮ್ಮದೇ ಸ್ವಂತ ಸೈನಿಕರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದಕ್ಕೆ ವಿಫಲರಾಗಿದ್ದೀರಿ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಸೂರ್ಯಕಾಂತ್ ಅವರು ಹೇಳಿದ್ದು, ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬರು ಕಾಮೆಂಟ್ ಮಾಡಿದ್ದು ಹೀಗೆ ಹೇಳಿದ್ದಾರೆ. 35 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಮತ್ತು ಒಬ್ಬ ಶ್ರದ್ಧಾವಂತ ಕ್ರೈಸ್ತನಾಗಿದ್ದ ನನ್ನ ತಂದೆ ಪ್ರತಿಯೊಂದು ದೇವಸ್ಥಾನ, ಗುರುದ್ವಾರ ಅಥವಾ ಇನ್ನಾವುದೇ ಪೂಜೆಗೆ ಹೋಗುತ್ತಿದ್ದರು, ಅವರನ್ನು ಆಹ್ವಾನಿಸಲಾಗುತ್ತಿತ್ತು ಮತ್ತು ಅವರು ಸ್ವಇಚ್ಛೆಯಿಂದ ಹೋಗುತ್ತಿದ್ದರು. ಅವರಿಗೆ ಆದೇಶ ನೀಡಬೇಕಾಗಿರಲಿಲ್ಲ, ಯಾರೂ ನಿಮ್ಮನ್ನು ಪ್ರಾರ್ಥಿಸಲು ಅಥವಾ ಅವರ ನಂಬಿಕೆಗಳನ್ನು ಅಥವಾ ದೇವರುಗಳನ್ನು ಸ್ವೀಕರಿಸಲು ಕೇಳುತ್ತಿಲ್ಲ, ನೀವು ಸೌಹಾರ್ದತೆಯ ಸಂಕೇತವಾಗಿ ಅಲ್ಲಿರಬೇಕು ಮತ್ತು ನಮ್ಮ ಸಹ ಸೈನಿಕರನ್ನು ಅವರು ಯಾರೆಂದು ಒಪ್ಪಿಕೊಳ್ಳಬೇಕು ಮತ್ತು ನಂತರ ಅವರು ನಿಮ್ಮನ್ನು ನೀವು ಯಾರೆಂದು ಒಪ್ಪಿಕೊಳ್ಳುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts