ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಶ್ರೀ ಆಂಜನೇಯ 57 ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಈಶ್ವರ ಭಟ್ ಪಂಜಿಗುಡ್ಢೆ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಡಿಸೆಂಬರ್ 25ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ವಾರ್ಷಿಕೋತ್ಸವ ಸಮಾರಂಭ ಜರಗಲಿದೆ.
ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿದಿಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ಸಂಘದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಪಂಚವಟಿ ತಾಳಮದ್ದಳೆ ಜರಗಿತು. ಭಾಗವತರಾಗಿ ಯಲ್. ಯನ್. ಭಟ್ ಬಟ್ಯಮೂಲೆ , ನಿತೀಶ್ ಎಂಕಣ್ಣಮೂಲೆ, ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ , ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ, ಸಮರ್ಥ ವಿಷ್ಣು, ಅನೀಶ್ ಕೃಷ್ಣ ಪುಣಚ ಹಾಗೂ ಅರ್ಥದಾರಿಗಳಾಗಿ ಗುಂಡ್ಯಡ್ಕ ಈಶ್ವರ ಭಟ್ (ಶ್ರೀರಾಮ), ಭಾಸ್ಕರ ಬಾರ್ಯ(ಮುನಿಗಳು) ದುಗ್ಗಪ್ಪ ನಡುಗಲ್ಲು( ಲಕ್ಷ್ಮಣ ) ಮಾಂಬಾಡಿ ವೇಣುಗೋಪಾಲ ಭಟ್ ( ಸೀತೆ) ಗುಡ್ಡಪ್ಪ ಬಲ್ಯ (ಘೋರ ಶೂರ್ಪನಖ) ಭಾಸ್ಕರ ಶೆಟ್ಟಿ ಸಾಲ್ಮರ (ಮಾಯಾ ಶೂರ್ಪನಖಿ ) ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು.

























