ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಾಲಯದ ಉದ್ಘಾಟನೆ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಆರ್.ಎಸ್.ಎಸ್.ನ ಹಿರಿಯ ಸ್ವಯಂ ಸೇವಕ ಸೀತಾರಾಮ ಕೆದಿಲಾಯ ಅವರು, ಭಾರತ ಬೆಳಕಿನ ದೇಶ. ಹಾಗಾಗಿ ದೇವಭೂಮಿ. ಇಂತಹ ಬೆಳಕಿನ ದೇಶ ಇನ್ನೊಂದಿಲ್ಲ. ಭಾರತ ವಿಶ್ವಗುರು ಆಗಬೇಕು. ಭಾರತ ಮಾತೆಯನ್ನು ವಿಶ್ವಗುರು ಪೀಠದಲ್ಲಿ ಕುಳ್ಳಿರಿಸಬೇಕು ಎನ್ನುವ ಸಂಕಲ್ಪ ನಮ್ಮದು. ಲೋಕಕಲ್ಯಾಣದ ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿ ಆಗಬೇಕು ಎಂದರು.
ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವ ಮೂಲಕ ಲೋಕ ಕಲ್ಯಾಣ ಆಗಬೇಕು. ಸಂಘಕ್ಕೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹವೂ ನಡೆಯಲಿದೆ. ಸ್ವಯಂ ಸೇವಕರಿಗೆ ಕ್ಷಾತ್ರ ತೇಜಸ್ಸು ತುಂಬಿಸುವ ಹಿನ್ನೆಲೆಯಲ್ಲಿ ಹಿಂದವೀ ಸಮಾವೇಶ ಆಯೋಜಿಸಿದ್ದೇವೆ. ಇದು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾಯಕ ಎಂದರು.
ಅಧ್ಯಕ್ಷ ನರಸಿಂಹ ಪ್ರಸಾದ್, ಗುರು ತಂತ್ರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಶುಭಹಾರೈಸಿದರು.
ಶ್ರೀರಾಮ್ ಭಟ್ ಪಾತಾಳ, ಶಶಾಂಕ್ ಕೋಟೆಚಾ, ಮಹೇಂದ್ರ ವರ್ಮಾ, ಚಂದಪ್ಪ ಮೂಲ್ಯ, ಸಿದ್ಧನಾಥ, ಉಮೇಶ್ ಕೋಡಿಬೈಲ್, ಪದ್ಮನಾಭ ಶೆಟ್ಟಿ, ಶ್ರೀಕೃಷ್ಣ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.


























