pashupathi
ಧಾರ್ಮಿಕ

ಮಂಗಳೂರು ದಸರಾ ಸಮಾರಂಭ, ಮೋಹನ್ ಆಳ್ವ ಅವರಿಗೆ ಸನ್ಮಾನ | ಜನಾರ್ದನ ಪೂಜಾರಿ, ಯು.ಟಿ.ಖಾದರ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಬ್ರಿಜೇಶ್ ಚೌಟ ಭಾಗಿ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಗುರುವಾರ ಮಂಗಳೂರು ದಸರಾ ಸಮಾರಂಭ, ಮಂಗಳೂರು ದಸರಾ ಸನ್ಮಾನ 2025 ನೆರವೇರಿತು.

akshaya college

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿ, ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತಾನು ಬರಿಗೈಯಲ್ಲಿದ್ದಾಗ ತನ್ನನ್ನು ಕರೆದು ಚುನಾವಣೆಗೆ ನಿಲ್ಲಿಸಿ, ನಾನು ಕೇಂದ್ರ ಸಚಿವನಾಗಲು ಕಾರಣರಾದರು. ಕುದ್ರೋಳಿಯ ನವೀಕರಣದ ಬಳಿಕ ದಿವಂಗತ ಇಂದಿರಾ ಗಾಂಧಿ ಈ ದೇವಸ್ಥಾನವನ್ನು ಉದ್ಘಾಟಿಸಿದರು. ರಾಜೀವ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಹೆಸರನ್ನು ಯಾವತ್ತು ಮರೆಯಬಾರದು ಎಂದು ಆಡಳಿತ ಸಮಿತಿಯವರಿಗೆ ಎಚ್ಚರಿಕೆ ನೀಡಿ ಶುಭ ಹಾರೈಸಿದರು.

kudroli

ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್, ಮಂಗಳೂರು ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಜಿಲ್ಲೆಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕುದ್ರೋಳಿಯಲ್ಲಿ ನಡೆಯುತ್ತಿರುವ ಮಂಗಳೂರು ದಸರಾದಲ್ಲಿ ಕಾಣಲು ಸಾಧ್ಯ. ನಾನು ಬಾಲ್ಯದಿಂದಲೂ ರಾಜಕೀಯ ಗುರುಗಳಾದ ಮಾಜಿ ವಿತ್ತ ಸಚಿವ ಬಿ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯುತ್ತಿರುವ ದಸರಾ ದೇವಸ್ಥಾನದ ಕೆಲಸ ಗಮನಿಸಿದ್ದೇನೆ. ಕುದ್ರೋಳಿ ಶ್ರೀ ಕ್ಷೇತ್ರ ಸೌಹಾರ್ದ ಪರಂಪರೆಯ ಸಂದೇಶವನ್ನು ದೇಶಕ್ಕೆ ಸಾರುವ ಕೇಂದ್ರ. ಎಲ್ಲಾ ಜಾತಿ, ಧರ್ಮ ನಮ್ಮನ್ನು ಒಂದುಗೂಡಿಸಬೇಕು; ನಮ್ಮನ್ನು ವಿಂಗಡಿಸುವಂತಾಗಬಾರದು. ಬ್ರಹ್ಮಶ್ರೀ ನಾರಾಯಣ ಗುರುಗಳು ನಮಗೆ ನೀಡಿದ ಸಂದೇಶವೂ ಅದೇ ಆಗಿದೆ. ನಾವೆಲ್ಲರೂ ಭಾರತೀಯರು ನಾವೆಲ್ಲ ಒಂದು ಎಂದು ಅರಿತುಕೊಂಡಾಗ ಸಮಾಜದ ಸಾಮೂಹಿಕ ಅಭಿವೃದ್ಧಿ ಸಾಧ್ಯ ಎಂದರು.

ಕರ್ನಾಟಕ ಸರಕಾರದ ಧಾರ್ಮಿಕ ದತ್ತಿಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಶುಭ ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಾ, ಮೈಸೂರು ದಸರಾದ ಬಳಿಕ ರಾಜ್ಯದಲ್ಲಿ ಮಂಗಳೂರು ದಸರಾ ಪ್ರತಿವರ್ಷ ಜನಾಕರ್ಷಣೆ ಪಡೆಯುತ್ತಿದೆ. ಜನಾರ್ದನ ಪೂಜಾರಿಯವರು ನೇತೃತ್ವದಲ್ಲಿ ಅವರ ಕಳಕಳಿಯಿಂದ ದಸರಾ ನಾಡಹಬ್ಬವಾಗಿ ಎಲ್ಲಾ ಜನ ಪಾಲ್ಗೊಳ್ಳುತ್ತಿರುವುದು ನಮ್ಮ ಪರಂಪರೆಯಾಗಿದೆ. ಧಾರ್ಮಿಕ ಚಟುವಟಿಕೆಗಳು ನಮ್ಮ ಬದುಕಿನ ಅಂಗವಾಗಿ ಇದೆ. ಇದರೊಂದಿಗೆ ನಾವು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಸಾಗಬೇಕಾಗಿದೆ. ಮುಂದಿನ ವರ್ಷ ದಿಂದ ಮಂಗಳೂರು ದಸರಾ ಉತ್ಸವಕ್ಕೂ ಸರಕಾರದ ಅನುದಾನ ನೀಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ ಸೋಜ, ಮುಖ್ಯ ಸಚೇತಕ ಅಶೋಕ್ ದೇವಪ್ಪ ಪಟ್ಟಣ್, ಗಡಿನಾಡ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ‌.ಆರ್.ಲೋಬೊ, ಹರೀಶ್ ಕುಮಾರ್ , ಕುದ್ರೋಳಿ ಕೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಸದಸ್ಯ ಹೆಚ್.ಎಸ್. ಸಾಯಿರಾಂ, ಕ್ಷೇತ್ರಾಭಿವೃದ್ಧಿ ಸಮಿತಿಯ ಚೇರ್ ಮನ್ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಟ್ರಸ್ಟಿ ಕೃತೀನ್ ಅಮೀನ್, ಸಮಿತಿಯ ಸದಸ್ಯ ಹರಿಕೃಷ್ಣ ಬಂಟ್ವಾಳ್, ಲೀಲಾಕ್ಷ ಕರ್ಕೆರಾ, ಸಂತೋಷ್ ಪೂಜಾರಿ ದೇವಳದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆಡಳಿತ ಸಮಿತಿಯ ಕೋಶಾಧಿಕಾರಿ ಆರ್.ಪದ್ಮರಾಜ್ ಸ್ವಾಗತಿಸಿದರು. ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ

ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ತುಕಾರಾಮ ಪೂಜಾರಿ, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದುರ್ಗಾ ಪ್ರಸಾದ್ ಎಂ.ಆರ್ ಅವರನ್ನು ಸನ್ಮಾನಿಸಲಾಯಿತು. ಮೂಕ ಪ್ರಾಣಿಗಳ ಸಾಕು ತಾಯಿ ಎಂದೇ ಖ್ಯಾತರಾದ ಶಾಲೆಟ್ ಅವರಿಗೆ ಅಸಮಾನ್ಯ ಸ್ತ್ರೀ ಗೌರವವನ್ನು ಪ್ರಧಾನ ಮಾಡಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…