ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿಯವರ ಚರ್ಚ್’ನಲ್ಲಿ ಸೋಮವಾರ ಸಂಭ್ರಮದ ಮೋಂತಿ ಫೆಸ್ಟ್ ಜರಗಿತು.
ತೆನೆಹಬ್ಬ ಪ್ರಯುಕ್ತ ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜಾ ಅವರು ಬಲಿಪೂಜೆ ನೆರವೇರಿಸಿದರು.
ಬಳಿಕ ಅಲ್ಲಿಪಾದೆ ಪೇಟೆಯಲ್ಲಿ ಮೇರಿ ಮಾತೆಯ ಭವ್ಯ ಮೆರವಣಿಗೆ ಸಾಗಿತು. ಈ ಸಂದರ್ಭ ಮಕ್ಕಳು ಪುಷ್ಪಾರ್ಚನೆ ಮಾಡುತ್ತಾ, ಮೇರಿ ಮಾತೆಯನ್ನು ಸ್ತುತಿಸಿದರು.
ಚರ್ಚ್ ಧರ್ಮಗುರು ಅತಿ ವಂದನೀಯ ರಾಬರ್ಟ್ ಡಿಸೋಜಾ ನೇತೃತ್ವ ವಹಿಸಿದ್ದರು. ಪೂಜಾ ವಿಧಿವಿಧಾನಗಳ ಬಳಿಕ ಸಿಹಿ ಹಾಗೂ ಕಬ್ಬು ವಿತರಣೆ ಮಾಡಲಾಯಿತು.
ಚರ್ಚ್ ಪಾಲನಾ ಸಮಿತಿಯ ಪದಾಧಿಕಾರಿಗಳು, ಚರ್ಚಿಗೆ ಸಂಬಂಧಪಟ್ಟ ಏಳು ವಾಳೆಯ ಗುರಿಕಾರರು, ಕ್ರೈಸ್ತ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.