ಪುತ್ತೂರು: ಉದಯ್ ಪೂಜಾರಿ ಸಾರಥ್ಯದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್ ಬಲ್ಲಾಲ್’ಭಾಗ್ ಬಿರುವೆರ್ ಕುಡ್ಲದ ಪುತ್ತೂರು ಘಟಕ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯನ್ನು ಭಾನುವಾರ ಬಿರುಮಲೆಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಆಚರಿಸಲಾಯಿತು.
ಘಟಕದ ವತಿಯಿಂದ ಆಶ್ರಮದಲ್ಲಿ ಅಡುಗೆ ಮಾಡಲು ಅವಶ್ಯಕತೆ ಇರುವ ಪಾತ್ರೆಗಳನ್ನು ಹಸ್ತಾಂತರ ಮಾಡಲಾಯಿತು. ಬೆಳಗ್ಗಿನ ಉಪಹಾರ ಹಾಗೂ ಸಂಜೆ ಸಿಹಿತಿಂಡಿ ನೀಡಿ, ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಲಾಯಿತು.
ಘಟಕದ ಹರೀಶ ಶಾಂತಿ ಪುತ್ತೂರು, ಭವಿತ್ ಕುಮಾರ್ ಕುರಿಯ, ಪ್ರಸಾದ್ ಪುರುಷರಕಟ್ಟೆ, ಬೇಬಿ ಹವೀಶ ಪುತ್ತೂರು ಭಾಗವಹಿಸಿದ್ದರು.
ಆಶ್ರಮದ ಮಕ್ಕಳು ದೀಪ ಬೆಳಗಿ, ಪ್ರಾರ್ಥಿಸಿದರು. ಆಶ್ರಮದ ಮುಖ್ಯಸ್ಥ ಅಣ್ಣಪ್ಪ ದಂಪತಿ ಸ್ವಾಗತಿಸಿದರು.