ಪುತ್ತೂರು: ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಜಿಯವರ 21ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಸಮರ್ಪಣೆ ಆಗಲಿರುವ ಬೆಳ್ಳಿಯ ಹರಿವಾಣ, ಪಾದುಕೆ, ಪೀಠದ ವೀಕ್ಷಣೆ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮ ಗುರುವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.

ಸೆ. 5ರ ಶುಕ್ರವಾರ ಪಡುಕುತ್ಯಾರು ಮಠದಲ್ಲಿ ಬೆಳ್ಳಿಯ ಹರಿವಾಣ, ಪಾದುಕೆ, ಪೀಠ ಸಮರ್ಪಣೆ ಆಗಲಿದೆ.
ಪುರೋಹಿತ ವೇ ಮೂ ವಿಶ್ವೇಶ್ವರ ಬಾಳಿಲ ಅವರು ದೀಪ ಪ್ರಜ್ವಲಿಸಿ ಪ್ರಾರ್ಥನೆ ಮಾಡಿದರು.
ಈ ಸಂದರ್ಭ ಗುರುಸೇವಾ ಪರಿಷತ್ ಪುತ್ತೂರು ಮಹಾಮಂಡಲ ಅಧ್ಯಕ್ಷ ವಿ. ಪುರುಷೋತ್ತಮ ಆಚಾರ್ಯ, ಕಾರ್ಯದರ್ಶಿ ನಿರಂಜನ ಆಚಾರ್ಯ ಮರೀಲು, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ, ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ರಜತ ಪೀಠದ ದಾನಿ ಶ್ರೀಧರ್ ಆಚಾರ್ಯ, ಅವರ ಸಹೋದರ ದಾಮೋದರ್ ಆಚಾರ್ಯ, ಪುತ್ರ ಗಣೇಶ್ ಎನ್. ಕಲ್ಲರ್ಪೆ ದಂಪತಿ, ಮಹಿಳಾ ಸಂಘದ ಅಧ್ಯಕ್ಷೆಇಂದಿರಾ ಪುರುಷೋತ್ತಮ ಆಚಾರ್ಯ, ಶ್ರೀರತ್ನ ಜ್ಯುವೆಲ್ಸ್ ಮಾಲಕ ರಾಜೇಶ್ ಎನ್., ಲಲಿತಾ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.
ಸಮಾಜ ಬಾಂಧವರು ಪಾದುಕೆ, ಹರಿವಾಣ ಮತ್ತು ಪೀಠಕ್ಕೆ ಪುಷ್ಪಾರ್ಚನೆ ಮಾಡಿದರು.

























