ಮುಸ್ಲಿಂ ಮಹಿಳೆಯೊಬ್ಬರು ದಕ್ಷಿಣದ ಕುಂಭಮೇಳ ಎಂಬ ಖ್ಯಾತಿಯ ಕೊಪ್ಪಳದ ಗವಿಮಠದಲ್ಲಿ ಧ್ಯಾನಕ್ಕೆ ಕುಳಿತು ಸುದ್ದಿಯಾಗಿದ್ದಾರೆ.
ಶಿಕ್ಷಣ ಸೇರಿದಂತೆ ಹತ್ತು ಹಲವು ವಿಚಾರಗಳಿಗೆ ಸುಪ್ರಸಿದ್ಧವಾಗಿರುವ ಗವಿಮಠದ ಇದೀಗ ಕೌತುಕದ ಕೇಂದ್ರವಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ಅವರು ಗವಿ ಮಠದಲ್ಲಿ ಧ್ಯಾನ ಮಾಡುತ್ತಿರುವ ಮುಸ್ಲಿಂ ಮಹಿಳೆ. ಹಿಂದೂ ಧರ್ಮದವರು ಗವಿ ಮಠಕ್ಕೆ ಬರುತ್ತಾರೆ. ಆದರೆ ಆವರಣದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರಿಂದ ಧ್ಯಾನ ಮಾಡಲಾಗುತ್ತಿದೆ.
ಗವಿ ಮಠದ ಶ್ರೀಗಳು ನಿತ್ಯ ಸಂಜೆ ಹೊತ್ತಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೆ ಮಹಿಳೆಯಿಂದ ಧ್ಯಾನ ಮಾಡಲಾಗುತ್ತಿದ್ದು. ಮಾನಸಿಕ ನೆಮ್ಮದಿಗಾಗಿ ಒಟ್ಟು 11 ದಿನದಿಂದ ಧ್ಯಾನ ಮಾಡುತ್ತಿರುವುದಾಗಿ ಹಸೀನಾ ಬೇಗಂ ಹೇಳಿಕೊಂಡಿದ್ದಾರೆ.
ಈ ಕುರಿತಾಗಿ ಸ್ವತಃ ಹಸೀನಾ ಬೇಗಂ ಅವರು ಮಾತನಾಡಿದ್ದು, ‘ಮನಸ್ಸಿಗೆ ನೆಮ್ಮದಿ ಇರಲಿಲ್ಲ, ಬಹಳ ಕಷ್ಟ ಇತ್ತು. ಹೀಗಾಗಿ ಶ್ರೀಗಳ ಬಳಿ ಕೇಳಿಕೊಂಡು ಎಂಟು ದಿನದಿಂದ ಧ್ಯಾನ ಮಾಡುತ್ತಿದ್ದೇನೆ. ನಾನು ಮುಸ್ಲಿಂ ಆದರೂ ಎಲ್ಲಾ ಧರ್ಮ ಒಂದೇ’ ಎಂದರು.
‘ನಾನು 13 ವರ್ಷದಿಂದ ಗವಿ ಮಠದ ಶ್ರೀಗಳನ್ನು ನಂಬಿದ್ದೇನೆ. ಮಠದಲ್ಲಿ ಮುಸ್ಲಿಂ ಎಂಬ ಬೇಧ-ಭಾವ ಇಲ್ಲ. ನನಗೆ ಒಬ್ಬರಿಂದ ನೋವು ಆಗಿದೆ. ಹಾಗಾಗಿ ನಿತ್ಯ ಒಂದು ಗಂಟೆ ಧ್ಯಾನಕ್ಕೆ ಕೂತಿದ್ದೇನೆ. ನನಗೆ ಬಹಳ ಕಷ್ಟ ಇದೆ, ಪರಿಹಾರ ಆಗತ್ತೆ. ನನ್ನ ಮಕ್ಕಳ ಮೇಲೂ ಅಜ್ಜರ ಆಶೀರ್ವಾದ ಇದೆ. ನಾಗಪ್ಪ, ಬಸವಣ್ಣ ಎಲ್ಲರನ್ನೂ ಪೂಜೆ ಮಾಡುತ್ತೇನೆ. ಮನಸ್ಸಿಗೆ ನೆಮ್ಮದಿ ಸಿಗುತ್ತೆ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ.