ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಪ್ರತಿಷ್ಠ ವಾರ್ಷಿಕ ಉತ್ಸವ ಏಪ್ರಿಲ್ 26ರಂದು ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು.
ದೇವಸ್ಥಾನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಆಮಂತ್ರಣ ಬಿಡುಗಡೆ ಮಾಡಿ, ವಿತರಣೆಯ ಜವಾಬ್ದಾರಿಯನ್ನು ಬೈಲುವಾರು ಸಮಿತಿಗೆ ನೀಡಲಾಯಿತು.
ದೇವಳದ ಆಡಳಿತ ಅಧಿಕಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಅರ್ಚಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.