ಪುತ್ತೂರು: ಬೀರಮಲೆ ವಿಶ್ವಕರ್ಮ ನಗರ ಶ್ರೀ ವಿಶ್ವಕರ್ಮ ಸಮಾಜ ಸಭಾದ ನೇತೃತ್ವದಲ್ಲಿ ಶ್ರೀ ವಿಶ್ವಕರ್ಮ ಮಂದಿರದಲ್ಲಿ ಭಾನುವಾರ ಯುಗಾದಿ ಪ್ರಯುಕ್ತ ಶ್ರೀ ಮಹಾಗಣಪತಿ ಹವನ ಹಾಗೂ ಪಂಚಾಂಗ ಶ್ರವಣ ನಡೆಯಿತು.
ಪುರೋಹಿತ ಗಿರೀಶ್ ಶರ್ಮಾ ಅವರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟು, ಪಂಚಾಂಗ ಶ್ರವಣ ನಡೆಸಿದರು.
ಬೀರಮಲೆ ವಿಶ್ವಕರ್ಮ ಸಮಾಜ ಸಭಾದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.