ಪುತ್ತೂರು: ಶ್ರೀ ರಾಮ ಭಜನಾ ಮಂದಿರದ ಭಕ್ತಕೊಡಿಯ ಅಧ್ಯಕ್ಷ ಹಾಗೂ ಷಣ್ಮುಖ ಯುವಕ ಮಂಡಲ ಸದಸ್ಯ ರಾಜೇಶ್ ಎಸ್.ಡಿ (45) ವಿಷ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತ ಹೊಂದಿದ್ದಾರೆ.
ಶನಿವಾರ ಸಂಜೆ ವಿಷ ಸೇವಿಸಿದ ರಾಜೇಶ್ ಅವರು, ಪುತ್ತೂರಿನ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.



























