pashupathi
ಧಾರ್ಮಿಕ

ಇಂದು ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನೇಮೋತ್ಸವ |  ವಿದ್ಯಾರ್ಥಿಗಳ ಆಟೋಟಕ್ಕೆ ಕೋಟಿ – ಚೆನ್ನಯರ ಶ್ರೀರಕ್ಷೆಯೇ ಈ ಕ್ಷೇತ್ರದ ವಿಶೇಷತೆ|ಬಾನೆತ್ತರಕ್ಕೆ ಬೋರ್ ವೆಲ್ ನೀರು ಚಿಮ್ಮಿ ವಿಸ್ಮಯ ಮೆರೆದ ಕ್ಷೇತ್ರ

tv clinic
ಪಡುಮಲೆಯಲ್ಲಿ ವೈನಸ್ಯ ಉಂಟಾಗಿ ತಮ್ಮಲ್ಲಿದ್ದ ಸುರಿಯವನ್ನು ಊರಿ, ಪಂಜ ಭಾಗದತ್ತ ಹೊರಟ ಕೋಟಿ – ಚೆನ್ನಯರಿಗೆ ಮೈದಾನ ಎದುರಾಗುತ್ತದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪಡುಮಲೆಯಲ್ಲಿ ವೈನಸ್ಯ ಉಂಟಾಗಿ ತಮ್ಮಲ್ಲಿದ್ದ ಸುರಿಯವನ್ನು ಊರಿ, ಪಂಜ ಭಾಗದತ್ತ ಹೊರಟ ಕೋಟಿ – ಚೆನ್ನಯರಿಗೆ ಮೈದಾನ ಎದುರಾಗುತ್ತದೆ. ಅಲ್ಲೇ ಇದ್ದ ಮರವೊಂದರ ಬುಡದಲ್ಲಿ ವಿಶ್ರಮಿಸುತ್ತಾರೆ. ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಜೊತೆ ಆಟವಾಡಿ, ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಒಂದು ದಿನ ಅಲ್ಲಿಯೇ ವಿಶ್ರಮಿಸುತ್ತಾರೆ ಕೂಡ. ಈ ಪ್ರದೇಶವೇ ಪಾಪೆಮಜಲು.

akshaya college

ಮಾ. 22(ಶನಿವಾರ)ರಂದು ಅರಿಯಡ್ಕ ಗ್ರಾಮದ ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬ್ರಹ್ಮಬೈದೇರುಗಳ ನೇಮೋತ್ಸವ ನಡೆಯಲಿದೆ. ವರ್ಷಗಳ ಹಿಂದೆಯಷ್ಟೇ ನವೀಕರಣ ಬ್ರಹ್ಮಕಲಶ ನಡೆದಿರುವ ಈ ಗರಡಿಗೂ ಪಕ್ಕದಲ್ಲೇ ಇರುವ ಪಾಪೆಮಜಲು ಉ.ಹಿ.ಪ್ರಾ. ಶಾಲಾ ಮಕ್ಕಳಿಗೂ ಒಂದು ಅವಿನಾಭಾವ ನಂಟಿದೆ ಎನ್ನುವುದನ್ನು ಇಲ್ಲಿನ ಐತಿಹ್ಯ ಬೆಳಕು ಚೆಲ್ಲುತ್ತದೆ.

ಪಡುಮಲೆಗೆ ಬೆನ್ನು ಹಾಕಿ ಹೊರಟು ಬರುವ ಕೋಟಿ – ಚೆನ್ನಯರು, ಪಾಪೆಮಜಲು ಮೈದಾನದಲ್ಲಿರುವ ಕಾಸರಕನ ಮರದ ಬುಡದಲ್ಲಿ ವಿಶ್ರಮಿಸುತ್ತಾರೆ. ಅಲ್ಲೇ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಜೊತೆಗೆ ಆಟವಾಡುತ್ತಾರೆ. ಹೀಗೆ ಮಕ್ಕಳೊಂದಿಗೆ ಬೆರೆತು  ಆಟವಾಡಿದ ಕಾರಣದಿಂದಲೋ ಏನೋ, ಇಂದು ಕೂಡ ಪಾಪೆಮಜಲು ಶಾಲಾ ವಿದ್ಯಾರ್ಥಿಗಳು ಆಟೋಟದಲ್ಲಿ ಒಂದು ಕೈ ಮೇಲೆ ಎನ್ನುವ ಮಾತು ಇದೆ. ಶಾಲಾ ಮುಂಭಾಗದಲ್ಲೇ ಇರುವ ವಿಶಾಲ ಮೈದಾನದಲ್ಲಿ ಗರಡಿ ಇದ್ದು, ಆಸ್ತಿಕ ಭಕ್ತರ ಇಷ್ಟಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಹೆಸರು ಪಡೆದಿದೆ.

ಬಾನೆತ್ತರಕ್ಕೆ ಚಿಮ್ಮಿದ ಬೋರ್ ವೆಲ್ ನೀರು:

ಒಂದೊಮ್ಮೆ ಬೋರ್ ವೆಲ್ ಕೊರೆಸುವಾಗ ನೀರು ರಭಸವಾಗಿ ಮೇಲ್ಮುಖವಾಗಿ ಚಿಮ್ಮಿ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆದ ಸುದ್ದಿಯನ್ನು ಎಲ್ಲರೂ ನೋಡಿರುತ್ತೇವೆ. ಹೀಗೆ ವಾಸ್ತವ ಜಗತ್ತಿಗೆ ವಿಸ್ಮಯಕಾರಿಯಾಗಿ ನೀರು ಚಿಮ್ಮಿದ ಘಟನೆ ನಡೆದಿರುವುದು ಇದೇ ಪಾಪೆಮಜಲು ಗರಡಿ ಬಳಿಯಲ್ಲಿ.

ಕ್ಷೇತ್ರಕ್ಕೆ ನೀರಿನ ವ್ಯವಸ್ಥೆ ಆಗಬೇಕಿತ್ತು. ಗರಡಿ ನೇಮದ ಸಂದರ್ಭ ಈ ಬಗ್ಗೆ ಅರಿಕೆ ಮಾಡಿಕೊಳ್ಳಲಾಯಿತು. ಬೈದೇರುಗಳು ಒಂದು ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ತಮ್ಮ ಸುರಿಯದಿಂದ ಗುರುತು ಹಾಕಿದರು. ಒಂದು ಪ್ರಶಸ್ತವಾದ ದಿನ ಬೋರ್ ವೆಲ್ ಆಗಮಿಸಿ, ಡ್ರಿಲ್ಲಿಂಗ್ ಕೆಲಸ ಶುರುವಾಯಿತು. ಬೋರ್ ವೆಲ್ ಕೆಲಸ ಸಾಗುತ್ತಿದ್ದಂತೆ ಎಲ್ಲಿಂದಲೋ ನೀರು ರಭಸವಾಗಿ ಮೇಲ್ಮುಖವಾಗಿ ಚಿಮ್ಮತೊಡಗಿತು. ಅದೆಷ್ಟು ಮೇಲ್ಮುಖವಾಗಿ ಚಿಮ್ಮಿತೆಂದರೆ, ಬೋರ್ ವೆಲ್ ಲಾರಿಯನ್ನು ಮೀರಿಸುವಷ್ಟು. ಒಂದು ಕ್ಷಣ ಬೋರ್ ವೆಲ್ ಕೊರೆಸುವವರೇ ಭಯವಿಹ್ವಲಗೊಂಡ ಘಟನೆ ನಡೆದಿತ್ತು.

ಸುರಿಯದಲ್ಲಿ ಕೂತು, ಜೆಡೆ ಎತ್ತಿದ ನಾಗರ:

ಗರಡಿ ಪಕ್ಕದಲ್ಲೇ ನಾಗನ ಆರಾಧನೆ ನಡೆಯುತ್ತದೆ. ಇದೀಗ ನಾಗನಿಗೆ ಕಟ್ಟೆಯನ್ನು ಕಟ್ಟಲಾಗಿದೆ. ಈ ಭಾಗದಲ್ಲಿ ನಾಗನ ಸಂಚಾರವೂ ಇದೆ. 2-3 ಸಲ ಬೈದೇರುಗಳ ಸುರಿಯದಲ್ಲಿ ನಾಗರಹಾವು ಕುಳಿತು, ಜೆಡೆ ತೆಗೆದ ದೃಷ್ಟಾಂತವೂ ಇಲ್ಲಿದೆ.

ಬ್ರಹ್ಮಕಲಶದ ವೈಭವ:

ಗರಡಿಯನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ. ಕೆಂಪು ಕಲ್ಲಿನ ಗೋಡೆ, ಮರಮುಟ್ಟುಗಳು, ಹಂಚಿನ ಮಾಡು ಹೀಗೆ ಎಲ್ಲವೂ ಸಾಂಪ್ರದಾಯಿಕ ಪರಿಧಿಯಲ್ಲೇ ಇದೆ. ಇದರಲ್ಲೇನು ವಿಶೇಷ ಎಂದು ಕೇಳುವುದಾದರೆ, ಈ ಎಲ್ಲಾ ಕೆಲಸಗಳನ್ನು ಕೇವಲ 2 ತಿಂಗಳು 4 ದಿನದಲ್ಲಿ ಪೂರ್ಣಗೊಳಿಸಲಾಗಿದೆ ಎನ್ನುವುದೇ ವಿಶೇಷ. ತ್ರಿವೇಣಿ ಪೆರುವೋಡಿ ಅವರು ನೇತೃತ್ವ ವಹಿಸಿದ್ದರು. ಮಹಿಳೆಯೋರ್ವರ ನೇತೃತ್ವದಲ್ಲಿ ಬ್ರಹ್ಮಕಲಶ ನಡೆದ ಇತಿಹಾಸ ಎಲ್ಲೂ ಇರಲಿಕ್ಕಿಲ್ಲ ಎನ್ನುವ ಹಿರಿಮೆಗೂ ಇವರು ಪಾತ್ರರಾಗಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…