ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ದಂಬೆತ್ತಿಮಾರ್’ದ ಮಾಯ್ಕಾರೆ ಅಜ್ಜೆ ಕೊರಗ ತನಿಯ ಕ್ಷೇತ್ರಕ್ಕೆ ಭಾನುವಾರ ಸಂಜೆ ಬೆಳ್ಳಿಯ ಗೋಂಪರ್, ಕಲ್ಲುರ್ಟಿ ದೈವದ ಪ್ರತಿಷ್ಠಾ ಮೂರ್ತಿ ಹಾಗೂ ಗುಳಿಗ ದೈವಕ್ಕೆ ತ್ರಿಶೂಲವನ್ನು ಮೆರವಣಿಗೆಯಲ್ಲಿ ತರಲಾಯಿತು.

ವಾಹನದಲ್ಲಿ ಆಗಮಿಸಿದ ಮೂರ್ತಿ, ಗೋಂಪರ್, ತ್ರಿಶೂಲವನ್ನು ಸಂಪ್ಯದಲ್ಲಿ ತೆಂಗಿನಕಾಯಿ ಒಡೆದು ಸ್ವಾಗತಿಸಲಾಯಿತು. ಬಳಿಕ ದಂಬೆತ್ತಿಮಾರ್ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ದಾಮೋದರ ಎಂ. ಮಾಲಡ್ಕ ಬೆಟ್ಟಂಪಾಡಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಇಂದು, ನಾಳೆ ನೇಮ:
ಸೋಮವಾರ ಬೆಳಗ್ಗೆ ಗಣಪತಿ ಹೋಮ, ಗೃಹ ಪ್ರವೇಶ ಮತ್ತು ಕಲ್ಲುರ್ಟಿ ದೈವದ ಪುನರ್ ಪ್ರತಿಷ್ಠಾಪನೆ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ 4ರಿಂದ ಊರಿನ ಹಾಗೂ ಪರವೂರಿನ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, 6ಕ್ಕೆ ದೈವಗಳ ಭಂಡಾರ ಇಳಿಸುವುದು, ರಾತ್ರಿ 8:30ರಿಂದ: ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ 9:30ರಿಂದ ಚೌಕಾರು ಮಂತ್ರವಾದಿ ಗುಳಿಗ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆ, ರಾತ್ರಿ 2ರಿಂದ ಕಲ್ಲುರ್ಟಿ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಮಾ. 11 ಮಂಗಳವಾರ ಬೆಳಿಗ್ಗೆ ಗಂಟೆ 8ರಿಂದ ಕೊರಗ ತನಿಯ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆ, ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.