ಪುತ್ತೂರು: ನೀರಿನ ಬಿಲ್ ಕಟ್ಟದ ಕಾರಣ ನನ್ನಮನೆಗೆ ನೀರು ಕೊಡುತ್ತಿಲ್ಲ, ಸಂಪರ್ಕ ಕಡಿತಮಾಡಿದ್ದಾರೆ ಎಂದುಮರೀಲ್ ನಿವಾಸಿ ಪೊಡಿಯ ಎಂಬ ವೃದ್ದೆಯೋರ್ವರು ಶಾಸಕರ ಕಚೇರಿಗೆ ಬಂದು ದೂರು ನೀಡಿದ್ದಾರೆ.
ಪೊಡಿಯ ಎಂಬವರ 5000 ಬಿಲ್ ಬಾಕಿ ಇದ್ದು ಅದನ್ನು ಪಾವತಿಸದ ಕಾರಣ ನೀರಿನ ಸಂಪರ್ಕ ಕಡಿತ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ಇವರಿಗೆ ನೀರು ಇರಲಿಲ್ಲ. ಈ ಬಗ್ಗೆ ಇಂದು ಶಾಸಕರ ಕಚೇರಿಗೆ ಬಂದು ತಮ್ಮ ಸಂಕಷ್ಟವನ್ನು ಹೇಳಿದ್ದಾರೆ. ಕೂಡಲೇ ಸ್ಪಂದಿಸಿದ ಶಾಸಕರು ವೃದ್ದೆಗೆ ಆರ್ಥಿಕ ನೆರವು ನೀಡಿದರು. ಬಳಿಕ ಜಲಸಿರಿ ಇಲಾಖೆಯವರಿಗೆ ಕರೆ ಮಾಡಿ ತಕ್ಷಣ ಕುಡಿಯುವ ನೀರಿನಸಂಪರ್ಕ ಮಾಡಿಕೊಡುವಂತೆ ಸೂಚನೆಯನ್ನು ನೀಡಿದ್ದಾರೆ.