ರಾಜಕೀಯ

ಟೀಕಿಸುವವರಿಗೆ, ವಿರೋಧಿಸುವವರಿಗೆ ಸವಾಲೆಸೆದು, ಕುಟುಕಿದ ಕಾವು ಹೇಮನಾಥ ಶೆಟ್ಟಿ | ಶಾಸಕರ ಮೇಲಿನ ಪ್ರೀತಿಯಿಂದ ಜನರು ಆಗಮಿಸಿದ್ದಾರೆ ಎನ್ನುವುದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮ ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿಗಳೇ ಸ್ವತಃ ಅಭಿಮಾನದ ಮಾತುಗಳನ್ನು ಆಡಿದ್ದಾರೆ. ಆದರೆ ಪುತ್ತೂರಿನ ಮಾಜಿ ಶಾಸಕರು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರು ಸುಳ್ಳು ಆರೋಪ ಮಾಡಿ, ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಳೆದ ಚುನಾವಣೆಯಲ್ಲಿ ಕೇವಲ 37 ಸಾವಿರ ಮತ ಪಡೆದಿದೆ. ಮುಂದಿನ ಚುನಾವಣೆಯಲ್ಲಿ ಇಷ್ಟು ಮತ ಸಿಗುವುದಿಲ್ಲ. ಇಡುವ ಡೆಪಾಸಿಟ್ ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದರ ಬಗ್ಗೆ ಚಿಂತಿಸಿ. ಅದು ಬಿಟ್ಟು ಒಳ್ಳೆಯ ಕೆಲಸ ಮಾಡುವವರ ಕುರಿತು ಮಾತನಾಡುವುದನ್ನು ಸಮಾಜ ಒಪ್ಪುವುದಿಲ್ಲ. ಜನಮನ ಕಾರ್ಯಕ್ರಮಕ್ಕೆ ಯಾವ ವಾಹನಗಳು ಇಲ್ಲದೆ ಕೇವಲ ಶಾಸಕರ ಪ್ರೀತಿಗಾಗಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದಾದರೆ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗೆ ಒಳಗಾದವರಿಗೆ ಟ್ರಸ್ಟ್ಮೂಲಕ ಆರೋಗ್ಯ ಸೇವೆ ನೀಡಲಾಗಿದೆ. ಅವರಿಗೆ ಪರಿಹಾರ ಕೊಡಲು ಬದ್ಧ. ಇದು ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲ. ಇದು ಟ್ರಸ್ಟ್ ಅಡಿಯಲ್ಲಿ ಆಗಿರುವುದು. ಖಾಸಗಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ತರಿಸುವುದು ಅಷ್ಟು ಸುಲಭವಲ್ಲ. ಆದರೆ ನಮ್ಮ ಶಾಸಕರು ಮಾಡಿ ತೋರಿಸಿದ್ದಾರೆ ಎಂದರು.

ಯಾವುದೇ ಒಂದು ವಾಹನ ಕೊಡದೆ ಒಂದು ರೀತಿಯಲ್ಲಿ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಕಾರ್ಯಗಳ ಮತ್ತು ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಒಂದು ರೀತಿಯ ಜನಸ್ತೋಮ ಸೇರಿದ್ದಾರೆ. ನಮ್ಮ ವಿರೋಧಿ ಆದರೂ ಕೂಡಾ ಒಳ್ಳೆಯ ಕಾರ್ಯಕ್ರಮ ಮಾಡುವಾಗ ಅದರಲ್ಲಿ ತಪ್ಪು ಹುಡುಕಿ ಸುಳ್ಳು ಸುಳ್ಳು ಹೇಳುವುದು ಸರಿಯಲ್ಲ ಎಂದು ಹೇಳುವುದು ನಮ್ಮ ವಾದ ಎಂದು ಹೇಮನಾಥ ಶೆಟ್ಟಿ ಹೇಳಿದರು.

ಮಳೆಯಿಂದ ವ್ಯತ್ಯಾಸ:

ಸಣ್ಣಪುಟ್ಟ ವ್ಯತ್ಯಾಸ ಮಳೆಯಿಂದ ಆಗಿದೆ ಹೊರತು ಬೇರಾವ ಸಮಸ್ಯೆ ಆಗಿರಲಿಲ್ಲ. ನಾಲ್ಕೈದು ಬಾರಿ ಬೇರೆ ಬೇರೆ ರೀತಿಯಲ್ಲಿ ಟ್ರಸ್ಟ್ ಸಭೆ ನಡೆಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲಾಗಿದೆ. ಆದರೆ ಕಾರ್ಯಕ್ರಮದ ದಿನ ವಿಪರೀತ ಮಳೆ ಬಂದಿದೆ. ಮಳೆ ಬಂದರೂ ಕಾರ್ಯಕ್ರಮದಲ್ಲಿ ತೊಡಕಾಗಿಲ್ಲ. ಬಂದವರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಇಷ್ಟು ಜನರನ್ನು ಸುಧಾರಿಸುವ ಸಣ್ಣ ಕೆಲಸವೂ ಅಲ್ಲ. ಶಾಸಕರು ಮತ್ತು ಅವರ ಕುಟುಂಬ ಹಾಗು ಟ್ರಸ್ಟ್ ಕಾರ್ಯಕರ್ತರು ಮಳೆಯಲ್ಲಿ ಒದ್ದೆಯಾಗಿ ಬಂದ ಜನರನ್ನು ಸುಧಾರಿಸುವ ಚಿತ್ರಣ ನೋಡಿದ್ದೇವೆ. ಅದನ್ನು ಬಿಟ್ಟು ತಪ್ಪು ಹುಡುಕುವುದು ಶೋಭೆ ತರುವಂತಹದ್ದು ಅಲ್ಲ ಎಂದು ಹೇಮನಾಥ ಶೆಟ್ಟಿ ಹೇಳಿದರು.

ಮಾಜಿ ಶಾಸಕರಿಗೆ ಸವಾಲು:

ಅಶೋಕ ಜನಮನದಲ್ಲಿ 15 ಸಾವಿರ ಚೆಯರ್ ಇದ್ದದ್ದು ಎಂದು ಹೇಳಿಕೆ ನೀಡಿದ್ದಾರೆ. ನಮ್ಮ ನಿರೀಕ್ಷೆ ಇದ್ದದ್ದು 1 ಲಕ್ಷ ಜನ ಸೇರಿಸಬೇಕು ಎಂದು. ಆದರೆ ಅದಕ್ಕೂ ಮಿಕ್ಕಿ ಜನ ಆಗಮಿಸಿದ್ದಾರೆ. ರಾತ್ರಿ 10 ಗಂಟೆವರೆಗೆ ಜನಸಾಗರ ಆಗಮಿಸುತ್ತಲೇ ಇತ್ತು. ಕುಳಿತುಕೊಳ್ಳುವ ಚೆಯರ್ ಗಳನ್ನು ಲೆಕ್ಕ ಹಾಕುವುದು ಸರಿಯಲ್ಲ. ಹಾಗೆಂದು ಶಾಸಕರು ಇದಕ್ಕಾಗಿ ಹಣ ಸಂಗ್ರಹ ಮಾಡಿಲ್ಲ. ಅವರ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡಿದ್ದಾರೆ. ಇದಕ್ಕೆ ಹೊಟ್ಟೆನೋವು ಪಡುವುದು ಯಾಕೆ? ವಿರೋಧಿಸುವವರು, ಟೀಕಿಸುವವರು ನಿಮ್ಮ ಯೋಗ್ಯತೆಗೆ ತಕ್ಕಂತೆ 1 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡಲಿ. ಏನಾದರೂ ಉಚಿತ ಉಡುಗೊರೆಯನ್ನು ತಮ್ಮ ಸಂಪಾದನೆಯಿಂದಲೇ ನೀಡಲಿ. ಬಿಜೆಪಿಯವರು ಇಷ್ಟು ವರ್ಷದಲ್ಲಿ ಏನಾದರೂ ಕೊಟ್ಟಿದ್ದು ಉಂಟೇ ಎಂದು ಕುಟುಕಿದರು.

ಪತ್ರಿಕಾಗೋಷ್ಟಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಲ್ಯಾನ್ಸಿ ಮೆಸ್ಕರೇನಸ್, ಅನ್ವರ್ ಖಾಸಿಂ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರಿತ್ ಕಣ್ಣರಾಯ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರಾಜ್ಯದ ಅತೀ ದೀರ್ಘಾವಧಿಯ ಮುಖ್ಯಮಂತ್ರಿ: ನಾಟಿಕೋಳಿ ಔತಣಕೂಟ ನೀಡಿ ಸಂಭ್ರಮಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ…