ಕೇಂದ್ರ ಸರ್ಕಾರಿ ಸ್ವಾಮ್ಯದ BSNL ಮೂರು ಪ್ರಮುಖ ರೀಚಾರ್ಜ್ ಪ್ಲಾನ್‌ಗಳನ್ನು ನಿಲ್ಲಿಸಲಿದೆ.
ಭಾರತದಲ್ಲಿ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಖಾಸಗಿ ಕಂಪನಿಗಳ ಜೊತೆಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೂ ಬೇಡಿಕೆ ಹೆಚ್ಚುತ್ತಿದೆ. 4ಜಿ ಸೇವೆ ಇದೀಗ ಲಭ್ಯವಾಗುತ್ತಿದ್ದರೂ ಕಡಿಮೆ ಬೆಲೆಯ ಪ್ಲಾನ್‌ಗಳಿಂದ ಬಿಎಸ್‌ಎನ್‌ಎಲ್‌ಗೆ ಬಳಕೆದಾರರು ಹೆಚ್ಚುತ್ತಿದ್ದಾರೆ.
ಆದರೆ, ಇದೀಗ ಬಿಎಸ್‌ಎನ್‌ಎಲ್ ಸಂಸ್ಥೆಯಿಂದ ಗ್ರಾಹಕರಿಗೆ ಒಂದು ಬಿಗ್ ಶಾಕ್ ನೀಡಲಾಗಿದೆ. ಫೆಬ್ರವರಿ 10, 2025 ರಿಂದ ಕೆಲವು ಪ್ಲಾನ್‌ಗಳನ್ನು ನಿಲ್ಲಿಸಲಿದೆ. ₹201, ₹797 ಮತ್ತು ₹2,999 ಪ್ಲಾನ್‌ಗಳನ್ನು ನಿಲ್ಲಿಸಲಿದೆ ಎಂದು ತಿಳಿದುಬಂದಿದೆ.
ಬಿಎಸ್‌ಎನ್‌ಎಲ್ ₹201 ಪ್ಲಾನ್: ಕಡಿಮೆ ಖರ್ಚಿನಲ್ಲಿ ಸಿಮ್ ಆ್ಯಕ್ಟಿವ್ ಇಡಲು ಬಯಸುವವರಿಗೆ ಈ ಪ್ಲಾನ್ ಉತ್ತಮವಾಗಿತ್ತು. 90 ದಿನಗಳ ವ್ಯಾಲಿಡಿಟಿ, 300 ನಿಮಿಷಗಳ ಕರೆ ಮತ್ತು 6 ಜಿಬಿ ಡೇಟಾ ಇತ್ತು.
ಬಿಎಸ್ಎನ್‌ಎಲ್ ₹797 ಪ್ಲಾನ್: ಇನ್ನು ₹797 ಪ್ಲಾನ್ 300 ದಿನಗಳ ವ್ಯಾಲಿಡಿಟಿ ಹೊಂದಿತ್ತು. ಆದರೆ 60 ದಿನಗಳವರೆಗೆ ಮಾತ್ರ ಅನ್‌ಲಿಮಿಟೆಡ್ ಕರೆ, ದಿನಕ್ಕೆ 2 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್‌ಗಳನ್ನು ನೀಡುತ್ತಿತ್ತು. 60 ದಿನಗಳ ನಂತರ ಯಾವುದೇ ಸೌಲಭ್ಯಗಳಿರಲಿಲ್ಲ.
ಬಿಎಸ್‌ಎನ್‌ಎಲ್ ₹2,999 ಪ್ಲಾನ್: ಈ ಪ್ಲಾನ್ ಒಂದು ವರ್ಷದ (365 ದಿನ) ವ್ಯಾಲಿಡಿಟಿ ಹೊಂದಿತ್ತು. ದಿನಕ್ಕೆ 3 ಜಿಬಿ ಡೇಟಾ, ಅನ್‌ಲಿಮಿಟೆಡ್ ಕರೆ ಮತ್ತು 100 ಎಸ್‌ಎಂಎಸ್‌ಗಳನ್ನು ನೀಡುತ್ತಿತ್ತು. ಫೆಬ್ರವರಿ 10 ರಿಂದ ಈ ಮೂರು ಪ್ಲಾನ್‌ಗಳನ್ನು ನಿಲ್ಲಿಸಲಾಗುತ್ತಿದೆ. ಫೆಬ್ರವರಿ 10 ಕ್ಕಿಂತ ಮೊದಲು ರೀಚಾರ್ಜ್ ಮಾಡಿದರೆ, ವ್ಯಾಲಿಡಿಟಿ ಮುಗಿಯುವವರೆಗೆ ಸೌಲಭ್ಯಗಳನ್ನು ಪಡೆಯಬಹುದು.