tamanvi
ದೇಶ

ವಿಶ್ವದ ಅತಿ ಶ್ರೀಮಂತ ಭಿಕ್ಷುಕ!ಭಿಕ್ಷೆ ಬೇಡಿಯೇ ಕೋಟ್ಯಾಂತರ ಗಳಿಸಿದ ಬಿಕ್ಷುಕ!!

D_shiva_bhat
ಮುಂಬೈನ ವ್ಯಕ್ತಿಯೊಬ್ಬ ಭಿಕ್ಷೆ ಬೇಡುವ ಮೂಲಕವೇ 7.5 ಕೋಟಿ ರೂ.ನಗದು ಗಳಿಸಿದ್ದಾನೆ. ಅಲ್ಲದೆ ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಎರಡು ಫ್ಲ್ಯಾಟ್ ಹೊಂದಿದ್ದಾನೆ. ಈಗ ಈತನನ್ನು ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ: ಮುಂಬೈನ ವ್ಯಕ್ತಿಯೊಬ್ಬ ಭಿಕ್ಷೆ ಬೇಡುವ ಮೂಲಕವೇ 7.5 ಕೋಟಿ ರೂ.ನಗದು ಗಳಿಸಿದ್ದಾನೆ. ಅಲ್ಲದೆ ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಎರಡು ಫ್ಲ್ಯಾಟ್ ಹೊಂದಿದ್ದಾನೆ. ಈಗ ಈತನನ್ನು ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಹೇಳಲಾಗುತ್ತಿದೆ. ಭರತ್ ಜೈನ್ ಒಂದು ಸ್ಟೇಷನರಿ ಅಂಗಡಿ ಹೊಂದಿದ್ದಾನೆ. ಅದಕ್ಕಿಂತಲೂ ಮುಖ್ಯವಾಗಿ ಆತನ ಕುಟುಂಬ ಭಿಕ್ಷೆ ಬೇಡುವುದನ್ನು ಒಪ್ಪುವುದಿಲ್ಲ. ಆದರೆ ಜೈನ್ ಮಾತ್ರ ಅದನ್ನೇ ಮುಂದುವರಿಸಲು ನಿರ್ಧರಿಸಿದ್ದಾನೆ.

maithri

ಕಳೆದ 40 ವರ್ಷಗಳಿಂದ ವಿರಾಮವಿಲ್ಲದೆ ದಿನಕ್ಕೆ 12 ಗಂಟೆ ಕಾಲ ಭಿಕ್ಷೆ ಬೇಡುವ ಈತ ಸುಮಾರು 2,500 ರೂ. ಗಳಿಸುತ್ತಾನೆ. ಅವನಿಗೆ ಅದೇ ಪ್ರಾಥಮಿಕ ಆದಾಯದ ಮೂಲವಾಗಿದೆ. ಭಿಕ್ಷೆಯಿಂದ ಆತ ತಿಂಗಳಿಗೆ ಸುಮಾರು 75,000 ರೂ.ಗಳಿಸುತ್ತಿದ್ದಾನೆ.

ತಾನು ಭಿಕ್ಷೆ ಬೇಡುವುದನ್ನು ಆನಂದಿಸುತ್ತೇನೆ ಮತ್ತು ಅದನ್ನು ಬಿಡಲು ಯಾವತ್ತೂ ಬಯಸುವುದಿಲ್ಲ ಎನ್ನುವ ಭರತ್ ಜೈನ್, ತನಗೇನೂ ದುರಾಸೆಯಿಲ್ಲ. ಸಿಕ್ಕಿದ ಹಣದಲ್ಲಿ ಒಂದು ಭಾಗವನ್ನು ದೇವಾಲಯಗಳಿಗೆ ದಾನ ಮಾಡುವುದಾಗಿ ಹೇಳುತ್ತಾನೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ! ಬಾಹ್ಯಾಕಾಶಕ್ಕೆ ರವಾನೆಯಾದ ಪ್ರಧಾನಿ ಮೋದಿಯ ಪೋಸ್ಟ್ ಕಾರ್ಡ್!

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ…