Gl harusha
ದೇಶಸ್ಥಳೀಯ

Crocodile: ಶಿವ ನದಿ ನೀರ ಬಿಟ್ಟು ನಡುರಸ್ತೆಯಲ್ಲಿ ನಡೆದಾಡಿದ ಮೊಸಳೆ: ವೀಡಿಯೋ ವೈರಲ್!!

ನದಿ ನೀರನ್ನು ಬಿಟ್ಟು ನಡುರಸ್ತೆಯಲ್ಲಿ ಮೊಸಳೆ crocodile ನಡೆದಾಡಿದರೆ ಹೇಗಾಗಬೇಡ! ಇಂತಹ ಸ್ಥಿತಿ ಕಂಡುಬಂದದ್ದು ಮಹಾರಾಷ್ಟ್ರದ ರತ್ನಗಿರಿಯ ಚಿಪ್ಲೂನ್‌ನಲ್ಲಿರುವ ಮುಖ್ಯ ರಸ್ತೆಯಲ್ಲಿ.

ಈ ಸುದ್ದಿಯನ್ನು ಶೇರ್ ಮಾಡಿ

ನದಿ ನೀರನ್ನು ಬಿಟ್ಟು ನಡುರಸ್ತೆಯಲ್ಲಿ ಮೊಸಳೆ crocodile ನಡೆದಾಡಿದರೆ ಹೇಗಾಗಬೇಡ! ಇಂತಹ ಸ್ಥಿತಿ ಕಂಡುಬಂದದ್ದು ಮಹಾರಾಷ್ಟ್ರದ ರತ್ನಗಿರಿಯ ಚಿಪ್ಲೂನ್‌ನಲ್ಲಿರುವ ಮುಖ್ಯ ರಸ್ತೆಯಲ್ಲಿ.

srk ladders
Pashupathi
Muliya

ನದಿಯಿಂದ ಬಂತೋ ಅಥವಾ ಮೃಗಾಲಯದಿಂದ ತಪ್ಪಿಸಿಕೊಂಡು ಬಂತೋ ಗೊತ್ತಿಲ್ಲ. ಆದರೆ ದೈತ್ಯ ಮೊಸಳೆ ನಡುರಸ್ತೆಯಲ್ಲಿ ರಾಜಾರೋಷವಾಗಿ ನಡೆದಾಡಿಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಪ್ಲುನ್ ಪ್ರದೇಶದ ಚಿಂಚನಕ ಪ್ರದೇಶದ ಜನರು ಇದೀಗ ಆತಂಕಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಇದೀಗ ಭಾರೀ ಮಳೆ. ಪರಿಣಾಮ ಪಕ್ಕದಲ್ಲೇ ಇರುವ ಶಿವನದಿಯಿಂದ ಮೊಸಳೆ ಹೊರ ಬಂದಿದೆ. ಶಿವನದಿಯಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಜನರಾಡಿಕೊಳ್ಳುತ್ತಿದ್ದಾರಂತೆ.

ಮೊಸಳೆ ನಡುರಸ್ತೆಯಲ್ಲಿ ರಾಜಾರೋಷವಾಗಿ ನಡೆದಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಜನರು ಆತಂಕಗೊಂಡಿದ್ದಾರೆ. ಹಾಗೆಂದು ಹೀಗೆ ಮೊಸಳೆ ರಸ್ತೆಗೆ ಬರುವುದು ಇದೇ ಮೊದಲಲ್ಲ. ಶಿವ ನದಿ ಉಕ್ಕಿ ಹರಿದರೆ ಸಾಕಂತೆ, ಮೊಸಳೆಗಳು ರಸ್ತೆಗೆ ಬಂದುಬಿಡುತ್ತವೆ ಎನ್ನುತ್ತಾರೆ ಇಲ್ಲಿನ ಜನರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts