ಕೃತಕ ಬುದ್ಧಿಮತ್ತೆ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ. ಏನು ಕೇಳಿದರೂ ಕೂಡ ಕ್ಷಣಾರ್ಧದಲ್ಲಿ ನೀಡಬಲ್ಲಂತಹ ಚಾಕಚಕ್ಯತೆ ಇದರಲ್ಲಿ ಇದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಇದರ ಬಳಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ನ್ಯಾಯಾಲಯಕ್ಕೂ ಕೂಡ Al ಕಾಲಿಟ್ಟಿದೆ.
Al ವಕೀಲರನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ವಾದ ಮಾಡಲು ಮುಂದಾಗಿದ್ದಾನೆ. ಇದನ್ನು ಕಂಡು ನ್ಯಾಯಾಧೀಶರೇ ಶಾಕ್ ಆಗಿರುವಂತಹ ಘಟನೆ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆದಿದೆ.
ನ್ಯೂಯಾರ್ಕ್ ರಾಜ್ಯ ಸುಪ್ರೀಂ ಕೋರ್ಟಿನ ಮೊದಲ ನ್ಯಾಯಾಂಗ ಇಲಾಖೆಯ ಮೇಲ್ಮನವಿ ವಿಭಾಗದಲ್ಲಿ ಮಾರ್ಚ್ 26ರಂದು ಈ ಘಟನೆ ನಡೆದಿದೆ.
ಉದ್ಯೋಗ ಸಂಬಂಧಿತ ಮೊಕದ್ದಮೆಯಲ್ಲಿ ಮೇಲ್ಮನವಿದಾರ ಜೆರೋಮ್ ಡೆವಾಲ್ಡ್ ತನ್ನ ವಾದವನ್ನು ಬೆಂಬಲಿಸಲು ವೀಡಿಯೊವನ್ನು ಸಲ್ಲಿಸಿದ್ದು ನ್ಯಾಯಾಧೀಶರ ಸಮಿತಿಯು ಅದನ್ನು ಆಲಿಸಲು ಕುಳಿತಾಗ, ನ್ಯಾಯಮೂರ್ತಿ ಸಾಲಿ ಮನ್ಹಾನೆಟ್-ಡೇನಿಯಲ್ಸ್ ಕ್ಲಿಪ್ ಅನ್ನು ಪರಿಚಯಿಸಿದರು.
ವೀಡಿಯೊ ಪ್ಲೇ ಆಗುತ್ತಿದ್ದಂತೆ, ತೀಕ್ಷ್ಣವಾಗಿ ಉಡುಪು ಧರಿಸಿದ, ನಗುತ್ತಿರುವ ವ್ಯಕ್ತಿ ಪರದೆಯ ಮೇಲೆ ಕಾಣಿಸಿಕೊಂಡು ಮಾತನಾಡಲು ಪ್ರಾರಂಭಿಸಿದನು: “ಇದು ನ್ಯಾಯಾಲಯಕ್ಕೆ ಸಂತೋಷವಾಗಲಿ. ನಾನು ಇಂದು ಐದು ಪ್ರಖ್ಯಾತ ನ್ಯಾಯಮೂರ್ತಿಗಳ ಸಮಿತಿಯ ಮುಂದೆ ವಿನಮ್ರವಾಗಿ ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದೆ.
ಇದನ್ನು ಕಂಡು ಕೆಲವೇ ಸೆಕೆಂಡುಗಳಲ್ಲಿ ನ್ಯಾಯಾಧೀಶರು ಗೊಂದಲಕ್ಕೆ ಒಳಗಾಗಿದ್ದಾರೆ. ಬಳಿಕ ಈ ನಡೆಯ ಬಗ್ಗೆ ನ್ಯಾಯಾಧೀಶರು ತಕರಾರು ಎತ್ತಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.