ಫ್ಲೋರಿಡಾ: ಭಾರತೀಯ ಸಂಜಾತೆ ಗಗನಯಾತ್ರಿ ಸುನಿತಾ ವಿಲ್ಲಿಯಮ್ಸ್ ಬರೋಬ್ಬರಿ 9 ತಿಂಗಳ ಕಾಲ ಅಂತರಿಕ್ಷ ವಾಸ ಮುಗಿಸಿ ಇಂದು ಮುಂಜಾನೆ ವೇಳೆ ಭೂಸ್ಪರ್ಶ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನ ಬಾಕಿಯಾಗಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಅವರನ್ನು ಭೂಮಿಗೆ ಕರೆತರುವ ಮಿಷನ್ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ.
ಗಗನಯಾತ್ರಿಗಳನ್ನು ಕರೆತರುವ ಮಿಷನ್ ಯಶಸ್ವಿ ಸಂಪನ್ನ ಫ್ಲೋರಿಡಾ: ಭಾರತೀಯ ಸಂಜಾತೆ ಗಗನಯಾತ್ರಿ ಸುನಿತಾ ವಿಲ್ಲಿಯಮ್ಸ್ ಬರೋಬ್ಬರಿ 9 ತಿಂಗಳ ಕಾಲ ಅಂತರಿಕ್ಷ ವಾಸ ಮುಗಿಸಿ ಇಂದು ಮುಂಜಾನೆ ವೇಳೆ ಭೂಸ್ಪರ್ಶ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನ ಬಾಕಿಯಾಗಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಅವರನ್ನು ಭೂಮಿಗೆ ಕರೆತರುವ ಮಿಷನ್ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ.
ಇಬ್ಬರನ್ನು ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ನೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್ ಕ್ರೂ ಡ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 8.35ಕ್ಕೆ 400 ಕಿ.ಮೀ ದೂರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪಯಣ ಆರಂಭಿಸಿತ್ತು. ನಿರಂತರ 17 ಗಂಟೆಗಳ ಪ್ರಯಾಣದ ಬಳಿಕ ಭಾರತೀಯ ಕಾಲಮಾನ ಇಂದು ನಸುಕಿನ 3.27ರ ಸಮಯಕ್ಕೆ ಅಮೆರಿಕದ ಫ್ಲೋರಿಡಾ ಕರಾವಳಿಯಾಚೆ ಸಾಗರದಲ್ಲಿ ಲ್ಯಾಂಡ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ 9 ತಿಂಗಳಿಂದ ಬೋಯಿಂಗ್ ಸ್ಟಾರ್‌ಲೈನರ್ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ನೋರ್ ಮತ್ತು ಇವರಿಬ್ಬರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ, ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ.
ಹೀಗಿತ್ತು ಲ್ಯಾಂಡಿಂಗ್
ಸ್ಪೇಸ್‌ಎಕ್ಸ್ ಡ್ಯಾಗನ್ ಸ್ಪೇಸ್‌ಕ್ರಾಫ್ಟ್ ದಿ ಕ್ಯೂ-9 ಭೂಮಿಯ ಗುರುತ್ವಾಕರ್ಷಣೆಗೆ ಒಳಪಡುತ್ತಿದ್ದಂತೆಯೇ ವೇಗ ಕಡಿಮೆ ಮಾಡಿಕೊಂಡಿತು. ನೌಕೆ ಸಮುದ್ರದತ್ತ ಧಾವಿಸುವಾಗ ಪ್ಯಾರಾಚೂಟ್‌ಗಳು ತೆರೆದುಕೊಂಡವು. ಮೊದಲಿಗೆ ಸ್ಪೇಸ್ ಎಕ್ಸ್‌ಡ್ಯಾಗನ್ ನೌಕೆಯನ್ನು ಸ್ಥಿರಗೊಳಿಸಲು ಎರಡು ಡೋಗ್ ಪ್ಯಾರಾಚೂಟ್‌ಗಳನ್ನು ತೆರೆಯಲಾಯಿತು. ಆ ನಂತರ ಲ್ಯಾಡಿಂಗ್ ಆಗಲೆಂದು ನೌಕೆಯ ವೇಗ ಮತ್ತಷ್ಟು ಕಡಿಮೆಮಾಡಲು ಮೇನ್ ಆಗಿದ್ದ ನಾಲ್ಕು ಪ್ಯಾರಾಚೂಟ್‌ಗಳನ್ನು ತೆರೆಯಲಾಯಿತು. ಇದಾದ ಕೆಲವೇ ಕ್ಷಣಗಳಲ್ಲಿ ನೌಕೆ ಅತ್ಯಂತ ಲಘುವಾಗಿ, ಸುರಕ್ಷಿತವಾಗಿ ಸಮುದ್ರಕ್ಕೆ ಅಪ್ಪಳಿಸಿತು. ಸಮುದ್ರಕ್ಕೆ ಬೀಳುತ್ತಿದ್ದಂತೆಯೇ ಸ್ಪೇಸ್ ಎಕ್ಸ್ ಕ್ಯೂಸ್‌ನ ಕ್ಯಾಪ್ಸಲ್ ತೇಲಲು ಪ್ರಾರಂಭಿಸಿತು. ಕ್ಯಾಪ್ಸಲ್ ಸಮುದ್ರದಲ್ಲಿ ಬಿದ್ದು ತೇಲುತ್ತಿದ್ದಂತೆಯೇ ಕೆಲವೇ ಕ್ಷಣಗಳಲ್ಲಿ ಮೂರು ಬೋಟ್‌ಗಳಲ್ಲಿ ಅಮೆರಿಕ ನೌಕಾಪಡೆ ಸ್ಥಳಕ್ಕೆ ಧಾವಿಸಿತು. ಸಿದ್ಧವಾಗಿ ನಿಂತಿದ್ದ ಸ್ಪೇಸ್ ಎಕ್ಸ್‌ನ ರಿಕವರಿ ಶಿಪ್ ಕೂಡ ಸ್ಥಳಕ್ಕೆ ಧಾವಿಸಿತು.
ನೌಕಾಪಡೆ ಸಿಬ್ಬಂದಿ ಮೊದಲಿಗೆ ಗಗನಯಾತ್ರಿಗಳಿದ್ದ ಕ್ಯಾಪ್ಸಲ್ ನಿಯಂತ್ರಣಕ್ಕೆ ರೋಪ್‌ಗಳಿಂದ ಕಟ್ಟಿ ಹಡಗಿನ ಬಳಿಗೆ ಎಳೆದೊಯ್ದರು. ಬಳಿಕ ಅತ್ಯಂತ ನಾಜೂಕಾಗಿ ಕ್ಯಾಪ್ಸಲನ್ನು ಹಡಗಿಗೆ ಸ್ಥಳಾಂತರ ಮಾಡಿದರು. ಇದಾದ ಕೆಲವೇ ಹೊತ್ತಿನಲ್ಲಿ ನಟ್ಟು, ಬೋಲ್ಡ್‌ಗಳಿಂದ ಟೈಟಾಗಿದ್ದ ಕ್ಯಾಪ್ಯೂಲ್‌ನ ಡೋರ್ ತೆಗೆಯಲಾಯಿತು. ಮೊದಲಿಗೆ ನಾಸಾ ಗಗನಯಾತ್ರಿ ಹೇಗ್‌ರನ್ನು ಹೊರಗೆ ತರಲಾಯಿತು. ನಂತರ ರಷ್ಯಾದ ಗಗನನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಹೊರಗೆ ತರಲಾಯಿತು. ಇವರಿಬ್ಬರೂ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಸುನೀತಾ ಮತ್ತು ವಿಲ್ಲೋರ್ ಅವರನ್ನು ಕರೆತರಲು 8 ದಿನಗಳ ಹಿಂದಷ್ಟೇ ತೆರಳಿದ್ದರು. ತಕ್ಷಣ ಎದ್ದು ನಿಲ್ಲಲು ಆಗದಿದ್ದರು ಇವರಿಬ್ಬರ ದೇಹಸ್ಥಿತಿಯಲ್ಲಿ ಅಷ್ಟಾಗಿ ಬದಲಾವಣೆ ಕಂಡುಬಂದಂತೆ ಕಾಣಲಿಲ್ಲ.
ಮೂರನೆಯವರಾಗಿ ಸುನೀತಾ ವಿಲಿಯಮ್ಸ್‌ರನ್ನು ಹೊರಗೆ ಕರೆತರಲಾಯಿತು. ಬರೋಬ್ಬರಿ 9 ತಿಂಗಳ ಬಳಿಕ ಭೂಮಿಗೆ ಬಂದ ಸುನೀತಾರ ಸಂತಸಕ್ಕೆ ಪಾರವೇ ಇರಲಿಲ್ಲ. ಎದ್ದು ನಿಲ್ಲಲೂ ಆಗದ ಸುನಿತಾ ಕುಳಿತಲ್ಲೇ ನಗುಮೊಗದೊಂದಿಗೆ ಕೈಬೀಸಿ ಸಂಭ್ರಮ ವ್ಯಕ್ತಪಡಿಸಿದರು. ಕೊನೆಯದಾಗಿ ಸುನೀತಾ ಜತೆಗಿದ್ದ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲೋರ್‌ನ್ನು ಹೊರಗೆ ತರಲಾಯಿತು. ಈ ಎಲ್ಲ ಪ್ರಕ್ರಿಯೆಗಳು ನಸುಕಿನ 3.28ಕ್ಕೆ ಶುರುವಾಗಿ 4.27ರ ಸುಮಾರಿಗೆ ಮುಕ್ತಾಯಗೊಂಡವು
ನಾಸಾ ಆಸ್ಪತ್ರೆಗೆ ಶಿಫ್ಟ್
ನಂತರ ನಾಲ್ವರು ಗಗನಯಾತ್ರಿಗಳನ್ನು ಅವರು ಧರಿಸಿದ್ದ ವಿಶೇಷ ಸ್ಪೇಸ್‌ಸೂಟ್‌ನಲ್ಲೇ ಹೆಲಿಕಾಪ್ಟರ್ ಮೂಲಕ ನಾಸಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಷ್ಟು ದಿನ ಬಾಹ್ಯಾಕಾಶದಲ್ಲಿದ್ದ ಕಾರಣ ಇಲ್ಲಿನ ವಾತಾವರಣಕ್ಕೆ ಗಗನಯಾತ್ರಿಗಳು ಹೊಂದಿಕೊಳ್ಳಬೇಕಿದೆ. ಅವರ ಆರೋಗ್ಯ ಸ್ಥಿತಿ ಸ್ಪಂದಿಸಬೇಕಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತೆ. ಸಮಗ್ರವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ.
8 ದಿನಕ್ಕೆಂದು ಹೋದವರು 286 ದಿನ ಬಾಕಿಯಾದರು
2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಲೋರ್ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಯೂಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಈ ಮುಂಚೆ 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿತ್ತು. ಆದರೆ ಇದೀಗ ಮಾರ್ಚ್‌ಗೆ ಮುಂದೂಡಿಕೆ ಆಗಿತ್ತು.
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ
ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ
ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು