ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್, ವಿದೇಶಿ ಸಾಂಸ್ಕೃತಿಕ ಪ್ರಭಾವವನ್ನು ತಡೆಯಲು ಮೂರು ಇಂಗ್ಲಿಷ್ ಪದಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಈ ಪದಗಳಿಗೆ ಸ್ಥಳೀಯ ಪರ್ಯಾಯಗಳನ್ನು ಸೂಚಿಸಿದ್ದು, ನಿಯಮ ಉಲ್ಲಂಘಿಸಿದರೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅಚ್ಚರಿ ಆದೇಶವನ್ನು ಹೊರಡಿಸಿದ್ದಾರೆ. ಮೂರು ಇಂಗ್ಲಿಷ್ ಪದಗಳ ಬಳಕೆಯನ್ನು ನಿಷೇಧಿಸಿರುವ ಕಿಮ್ ಜಾಂಗ್-ಉನ್, ವಿದೇಶಿ ಸಾಂಸ್ಕೃತಿಕ ಒಳನುಸುಳುವಿಕೆಯನ್ನು ತಡೆಗಟ್ಟಲು ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
“ಹ್ಯಾಂಬರ್ಗರ್,” “ಐಸ್ ಕ್ರೀಮ್,” ಮತ್ತು “ಕರೋಕೆ” (ice-cream, hamburger, karaoke) ನಿಷೇಧಿಸಲಾಗಿದೆ. ಹ್ಯಾಂಬರ್ಗರ್ ಅನ್ನೋದು ಮಾಂಸದಿಂದ ತಯಾರಿಸಲಾದ ಆಹಾರವಾಗಿದೆ.
ಹ್ಯಾಂಬರ್ಗರ್ ಬದಲಾಗಿ ದಹಿನ್-ಗೋಗಿ ಗಿಯೊಪ್ಪಾಂಗ್ ಬಳಕೆ ಮಾಡಬೇಕು.
ಐಸ್ ಕ್ರೀಮ್ ಬದಲಾಗಿ ಎಸುಕಿಮೊ ಬಳಕೆ ಮಾಡಬೇಕು. ಕ್ಯಾರಿಯೋಕೆ ಬದಲಾಗಿ ಆನ್-ಸ್ಟೀನ್ ಪಕ್ಕವಾದ್ಯ ಯಂತ್ರಗಳು ಎಂದು ಕರೆಯಬೇಕು.
ಸರ್ಕಾರದ ತರಬೇತಿ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಗುರುತಿಸಲ್ಪಟ್ಟ ಈ ಪದಗಳು ಮತ್ತು ಘೋಷಣೆಗಳನ್ನು ಮಾರ್ಗದರ್ಶಿಗಳು ನೆನಪಿಟ್ಟುಕೊಳ್ಳಬೇಕಾಗುತ್ತದೆ ಎಂದು ಆದೇಶ ಮಾಡಲಾಗಿದೆ.