ಆರೋಗ್ಯ

ಜ. 26ರಂದು ಬೆಳ್ಳಾರೆಯಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ನೂತನ ಶಾಖೆ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ನೂತನ ಬೆಳ್ಳಾರೆ ಶಾಖೆಯ ಉದ್ಘಾಟನಾ ಸಮಾರಂಭ ಜ. 26ರಂದು ಬೆಳಿಗ್ಗೆ 8.15ಕ್ಕೆ ಬೆಳ್ಳಾರೆ ಮುಖ್ಯರಸ್ತೆಯ ಅಮ್ಮು ರೈ ಕಾಂಪ್ಲೆಕ್ಸ್’ನಲ್ಲಿ ನಡೆಯಲಿದೆ.

ನಿಖರ, ತ್ವರಿತ ಹಾಗೂ ಪಾರದರ್ಶಕ ಫಲಿತಾಂಶದ ಅಸಂಖ್ಯಾತ ಜನರ ವಿಶ್ವಾಸ ಗಳಿಸಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ, ಸೂಪರ್ ಸ್ಪೆಷಾಲಿಟಿ ಡಯಾಗ್ನೋಸ್ಟಿಕ್ ಸೆಂಟರ್ ಆಗಿದೆ. ಪುತ್ತೂರಿನಲ್ಲಿ ಜನಮನ್ನಣೆ ಗಳಿಸಿ, ಇದೀಗ ಬೆಳ್ಳಾರೆಯಲ್ಲಿಯೂ ಶಾಖೆ ತೆರೆಯುತ್ತಿದ್ದು, ಬೆಳ್ಳಾರೆ ಜನರ ಸೇವೆಗೆ ಮುಂದಾಗಿದೆ.
2004ರಿಂದ ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರವಾಗಿಯೂ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ, ಕಾರ್ಯನಿರ್ವಹಿಸುತ್ತಿದೆ.

ಬೆಳ್ಳಾರೆ ಶಾಖೆಯ ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್. ರೈ, ಸುಳ್ಯ ಟಿ.ಎಚ್.ಓ. ಡಾ. ಆಶಾ ಅಭಿಕರ್, ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕ ಡಿ.ಎನ್. ಈರಯ್ಯ, ಬೆಳ್ಳಾರೆ ಪ್ರಾ. ಕೃ. ಪ. ಸ. ಸಂಘ ನಿಯಮಿತ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಝಕರಿಯ್ಯ ಜುಮಾ ಮಸ್ಜಿದ್ ಅಧ್ಯಕ್ಷ ಯು.ಎಚ್. ಅಬೂಬಕ್ಕರ್, ವಿನೋದ್ ರೈ ಪಾಲ್ತಾದ್ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts