ಉಳ್ಳಾಲ: ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಗ್ಯಾಸ್ ಸೋರಿಕೆಯಾಗಿ ಡಿ.7ರ ಶನಿವಾರ ತಡರಾತ್ರಿ ಸ್ಪೋಟಗೊಂಡಿದ್ದು, ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮಂಜನಾಡಿ ಕಂಡಿಕ ನಿವಾಸಿ ಮುತ್ತಲಿಬ್ ಬಿನ್ ಇಸ್ಮಾಯಿಲ್ ಎಂಬವರ ಪತ್ನಿ ಕುಬ್ರ (40), ಮೆಹದಿ(15), ಮಝಹಾ (13) ಮಾಯಿಝಾ (11) ಗಂಭೀರ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.