Gl jewellers
ಶಿಕ್ಷಣ

ಅಕ್ಷಯ ಕಾಲೇಜು : ಎನ್.ಎಸ್.ಎಸ್ ಸ್ವಯಂ ಸೇವಕ ಉಜ್ವಲ್ ಗೆ ರಾಜ್ಯ ಯುವಜನೋತ್ಸವದಲ್ಲಿ ಪ್ರಶಸ್ತಿ

ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಾಗಾವಿ ಗದಗ ಇಲ್ಲಿ ಫೆ.18 ರಿಂದ ಫೆ.22 ರವರೆಗೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕ ಉಜ್ವಲ್ ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಿ ಯುವಜನೋತ್ಸವದಲ್ಲಿ ನಡೆದ ವೈಯಕ್ತಿಕ ಛಾಯಾಗ್ರಹಣ ಸ್ಪರ್ಧೆಯಲ್ಲಿ ತೃತೀಯ, ಗುಂಪು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ,

ಈ ಸುದ್ದಿಯನ್ನು ಶೇರ್ ಮಾಡಿ


ಪುತ್ತೂರು: ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಾಗಾವಿ ಗದಗ ಇಲ್ಲಿ ಫೆ.18 ರಿಂದ ಫೆ.22 ರವರೆಗೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕ ಉಜ್ವಲ್ ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಿ ಯುವಜನೋತ್ಸವದಲ್ಲಿ ನಡೆದ ವೈಯಕ್ತಿಕ ಛಾಯಾಗ್ರಹಣ ಸ್ಪರ್ಧೆಯಲ್ಲಿ ತೃತೀಯ, ಗುಂಪು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ಪ್ರಹಸನ ದ್ವಿತೀಯ ಹಾಗೂ ಮೂಖಾಭಿನಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಜೊತೆಗೆ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಸಮಗ್ರ ಪ್ರಶಸ್ತಿ ಪಡೆದಿದೆ.
ಉಜ್ವಲ್ ಅಡೂರು ಉಮೇಶ್ ನಾಯ್ಕ್ ಹಾಗೂ ನಿಶಾ ನಾಯ್ಕ್ ದಂಪತಿಗಳ ಪುತ್ರ. ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಜಯಂತ್ ನಡುಬೈಲು, ಪ್ರಾಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿಗಳಾದ ಅರ್ಪಿತ್ ಟಿ ಎ, ಮಂಗಳೂರು ವಿ.ವಿ ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳಾದ ಡಾ.ಶೇಷಪ್ಪ ಕೆ ಹಾಗೂ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಕಿಶೋರ್ ಕುಮಾರ್ ರೈ, ಮೇಘಶ್ರೀ ಹಾಗೂ ಬೋಧಕ- ಭೋದಕೇತರರು, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Papemajalu garady
Karnapady garady

ಈ ಸುದ್ದಿಯನ್ನು ಶೇರ್ ಮಾಡಿ

Related Posts

ಬಿಸಿಲ ತಾಪಕ್ಕೆ ನೆರಳಾದ ಗುಜುರಿ ಹಣ!! ಹೀಗೂ ಬಸ್ ನಿಲ್ದಾಣ ನಿರ್ಮಿಸಬಹುದೆಂದು ತೋರಿಸಿಕೊಟ್ಟ ಎನ್.ಎಸ್.ಎಸ್. ಕಾರ್ಯಕರ್ತರು!

ಗುಜಿರಿ ಸಂಗ್ರಹಿಸಿ ಮಾರಿ ಸಿಕ್ಕಿದ ಹಣದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ವಿದ್ಯಾರ್ಥಿಗಳು