ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಜಿ. ಸುನಿಧಿ ಪ್ರಭು ಅವರು ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಕಂಪೆನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರಾನ್ಸ್ ಟೆಸ್ಟ್ (ಸಿಎಸ್‌ಇಇಟಿ) ನಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.
ಇವರು ಪುತ್ತೂರು ದರ್ಬೆಯ ಜಿ ರಾಮ ಎಸ್ ಪ್ರಭು ಮತ್ತು ಜಿ ಶ್ರೀರಮಾ ಪ್ರಭು ದಂಪತಿ ಪುತ್ರಿ.
ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
























