ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇದರ ವಾಗ್ವೈಭವ ಸಂಸ್ಕೃತ ಸಂಘದಿಂದ ಗೀತಾ ಜಯಂತಿ ಪ್ರಯುಕ್ತ ಆಯೋಜಿಸಲಾದ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಅತಿಥಿ ವೇದವ್ಯಾಸ ರಾಮಕುಂಜ ಅವರು ಭಗವದ್ಗೀತೆ ಮತ್ತು 18 ಸಂಖೆಯ ಮಹತ್ವವನ್ನು ವಿಮರ್ಶಿಸಿದರು.
ಅಕ್ಷಯ ಕಾಲೇಜ್ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಅವರು ಸಂಸ್ಕೃತದಿಂದಲೇ ಎಲ್ಲಾ ಭಾಷೆಗಳು ಉತ್ಪತ್ತಿಗೊಂಡಿವೆ ಮತ್ತು ಶ್ರೀಕೃಷ್ಣನೇ ಮೊದಲ ಮನಶಾಸ್ತ್ರಜ್ಞ ಎಂದು ಅಭಿಪ್ರಾಯಿಸಿದರು.
ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗರತ್ನ, ಸಂಸ್ಕೃತ ಸಂಘದ ಸಂಯೋಜಕಿ ಸಾಯಿ ಕೃಪಾ ಕೆ ಉಪಸ್ಥಿತರಿದ್ದರು.
ಬಳಿಕ ವಿಜೇತರಿಗೆ ನಗದು ಬಹುಮಾನ ಮತ್ತು ಭಗವದ್ಗೀತೆಯ ಪುಸ್ತಕವನ್ನು ನೀಡಲಾಯಿತು. ಬಹುಮಾನ ವಿಜೇತರ ಹೆಸರನ್ನು ಅಕ್ಷಿತ್ ಕೆ ಆರ್ ಸಂಸ್ಕೃತ ಸಂಘದ ಅಧ್ಯಕ್ಷರು ಘೋಷಿಸಿದರು.
ವಿದ್ಯಾರ್ಥಿನಿಯರಾದ ಪ್ರಕೃತಿ, ಗೌತಮಿ, ರಿಷಿತ ಪ್ರಾರ್ಥಿಸಿದರು. ಅವಿಷ್ ಎಸ್ ಶೆಟ್ಟಿ ಸ್ವಾಗತಿಸಿದರು. ಸಾಯಿ ಕೃಪಾ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಶಸ್ವಿ ಬಿ ಕೆ ವಂದಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ಅಪೇಕ್ಷ ಕೆ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



























