ಶಿಕ್ಷಣ

ಆಧುನಿಕ ಉಪಕರಣಗಳು: ಅಕ್ಷಯ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಕ್ಷಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಎಲೈಟ್ ಆಂತರಿಕ ವಿನ್ಯಾಸ ಸಂಘ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ  ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಉಪಕರಣಗಳು  ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.

core technologies

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಯು-ಮನೆ  ಸಂಘದ ಮಾಲಿಕರಾದ, ವಾಸ್ತುಶಿಲ್ಪಿ ಅಜೇಯಕೃಷ್ಣ ಉಪಾಂಗಲ ದೀಪ ಬೆಳಗಿಸಿ ಮಾತನಾಡಿ, ಆಧುನಿಕ ಉಪಕರಣಗಳ ಬಗೆಗೆ ಮಾಹಿತಿ, ಪ್ರಾಚೀನ ಮತ್ತು ಈಗಿನ ಆಂತರಿಕ ವಿನ್ಯಾಸ ಶೈಲಿ, ಹೊಸ ಪ್ರವೃತಿಯ ಉಪಕರಣಗಳು ಹೇಗೆ ಬಳಕೆಯಾಗುತ್ತದೆ ಎಂಬುದರ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳಿಗೆ ಚಟುವಟಿಕೆಯ ಮೂಲಕ ಕಾರ್ಯಗಾರವನ್ನು ನಡೆಸಿಕೊಟ್ಟರು.

akshaya college

ಆಂತರಿಕ ವಿನ್ಯಾಸವಿಭಾಗದ ಮುಖ್ಯಸ್ಥ ರಕ್ಷಣ ಟಿ. ಆರ್ ಕಾರ್ಯಕ್ರಮದ ವಿಚಾರವಾಗಿ ಮಾತಾಡಿದರು. ಐಕ್ಯೂಎಸಿಯ ಸಂಯೋಜಕಿ ರಶ್ಮಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಕಾಲೇಜಿನ ಆಂತರಿಕ ವಿನ್ಯಾಸ ವಿಭಾಗದ ಉಪನ್ಯಾಸಕಿ, ಎಲೈಟ್ ಸಂಘದ ಸಂಚಾಲಕಿ ಕುಮಾರಿ ಶ್ರದ್ಧಾ ಪ್ರಾಸ್ತಾವಿಕ ಭಾಷಣ ಮಾಡಿದರು. ಆಂತರಿಕ ವಿನ್ಯಾಸ ವಿಭಾಗದ  ಉಪನ್ಯಾಸಕಿ ಕಾವ್ಯಭಟ್ ಅವರು ಮುಖ್ಯ ಅತಿಥಿಯ ಪರಿಚಯ ಮಾಡಿದರು.

ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಾದ ದುರ್ಗಾ ಲಕ್ಷ್ಮೀ, ನಿಶಿತ, ನಿಖಿತ ಪ್ರಾರ್ಥಿಸಿದರು. ಎಲೈಟ್ ಸಂಘದ ಅಧ್ಯಕ್ಷ  ಸೃಜನ್ ಸ್ವಾಗತಿಸಿದರು, ಎಲೈಟ್ ಸಂಘದ ಉಪಾಧ್ಯಕ್ಷೆ ನಿಹಾ ವಂದಿಸಿದರು. ಸ್ಫೂರ್ತಿ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಯಶಸ್ಸು ನಮ್ಮ ಆಯ್ಕೆ, ಅವಕಾಶವಲ್ಲ: ಡಾ.ಎಂ.ಎಸ್.ಮೂಡಿತ್ತಾಯ | ಅಂಬಿಕಾ ಪ.ಪೂ.ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ 2025-26

ಪುತ್ತೂರು: ಪ್ರಪಂಚದ ನೂರ ತೊಂಬತ್ತಮೂರಕ್ಕೂ ಹೆಚ್ಚಿನ ರಾಷ್ಟ್ರಗಳ ಮಧ್ಯೆ ಭಾರತ ನಿರ್ಲಕ್ಷಿಸಲಾಗದ…