ಶಿಕ್ಷಣ

ಅಂಬಿಕಾ ಬಪ್ಪಳಿಗೆ – ನೆಲ್ಲಿಕಟ್ಟೆ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ | ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡಾಕೂಟ: ಡಾ. ಸಚಿನ್ ಮನೋಹರ್ ಶೆಟ್ಟಿ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶಾರೀರಿಕ, ಮಾನಸಿಕ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ  ಬೆಳವಣಿಗೆಗೆ ಆಟೋಟ, ವ್ಯಾಯಾಮ ಹಾಗೂ ಶಾರೀರಿಕ ಚಟುವಟಿಕೆಗಳು ಅತ್ಯಂತ ಅಗತ್ಯ. ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸಿರುತ್ತದೆ ಎಂದು ಪುತ್ತೂರಿನ ಖ್ಯಾತ ಚರ್ಮ ರೋಗ ತಜ್ಞ ಡಾ. ಸಚಿನ್ ಮನೋಹರ್ ಶೆಟ್ಟಿ ಹೇಳಿದರು.

core technologies

ಅವರು ಪುತ್ತೂರಿನ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಹಾಗೂ ಬಪ್ಪಳಿಗೆ  ವಸತಿಯುತ ಪದವಿ ಪೂರ್ವ ವಿದ್ಯಾಲಯಗಳ  ಕ್ರೀಡಾಕೂಟವನ್ನು ಧ್ವಜಾರೋಹಣಗೈದು, ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

akshaya college

ವಿದ್ಯಾರ್ಥಿಗಳು ಐ.ಐ.ಟಿ., ಜೆ.ಇ.ಇ.ನಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದು ಅತ್ಯಗತ್ಯ. ಓದಿನ ಭರದಲ್ಲಿ ದೇಹಕ್ಕೆ ತಕ್ಕಷ್ಟು ವ್ಯಾಯಾಮ ನೀಡುವುದನ್ನು ಮರೆಯಬಾರದು. ಪ್ರತಿದಿನ ಕನಿಷ್ಠ ಹದಿನೈದು ನಿಮಿಷ ನಡಿಗೆ ಅಥವಾ ಆಟೋಟಗಳಲ್ಲಿ ತೊಡಗಿಕೊಳ್ಳುವುದು ಅಗತ್ಯ. ಕ್ರೀಡೆಗಳಲ್ಲಿ  ಸೋಲು- ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಕಠಿಣ ಪರಿಶ್ರಮ, ಸಮರ್ಪಣಾ ಭಾವದಿಂದ ಯಾವುದೇ ಕೆಲಸ ನಿರ್ವಹಿಸಿದಾಗ ಯಶಸ್ಸು ಲಭಿಸುತ್ತದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಎಲ್ಲರಲ್ಲೂ ರಾಷ್ಟ್ರ ಪ್ರಜ್ಞೆ ಜಾಗೃತವಾಗಿರುವುದು ಅವಶ್ಯ. ಸೈನಿಕರು ರಾಜಸ್ಥಾನದಂತಹ ಮರುಭೂಮಿಯಲ್ಲಿ, ಗಡಿ ಪ್ರದೇಶಗಳಲ್ಲಿ ಸಹಿಸಲೂ ಸಾಧ್ಯವಾಗದ  ಉಷ್ಣತೆ ಹಾಗೂ ಚಳಿಯ ವಾತಾವರಣದಲ್ಲಿ ದೇಶಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸುತ್ತಾರೆ. ಬಿಸಿಲಿಗೆ ಹಿಂಜರಿಯದೆ ಆಟೋಟಗಳಲ್ಲಿ ಭಾಗವಹಿಸುವುದು ಅಗತ್ಯ ಎಂದರು.

ನಟ್ಟೋಜಾ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜಾ, ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಪ್ರತೀಕ್ಷಾ ಶೆಣೈ, ಯುಕ್ತ ವರ್ಷಿಣಿ, ಉನ್ನತ ಶೆಣೈ, ಡಿ. ಆರ್.  ಶ್ರೀಯಾ, ವರ್ಧಿನ್ ದೀಪಕ್ ರೈ, ಬಿ. ಆರ್. ಸೂರ್ಯ, ಜ್ಞಾನ ಬಿ. ಪಿ. ಕ್ರೀಡಾ ಜ್ಯೋತಿಯನ್ನು ತರುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಭಾಸ್ಕರ, ಆರ್ಯಭಟ, ಕಾಂಚಿ, ಕೌಟಿಲ್ಯ, ಕಣಾದ, ಪಾಣಿನಿ, ಸುಶ್ರುತ, ಚರಕ, ಕಪಿಲ, ಪತಂಜಲಿ, ನಳಂದಾ, ತಕ್ಷಶಿಲಾ, ಗಾರ್ಗಿ, ಮೈತ್ರೇಯಿ, ಚಾಣಕ್ಯ, ವಿಕ್ರಮಶಿಲಾ ಮೊದಲಾದ ತಂಡಗಳು ಪಥ ಸಂಚಲನದ ಮೂಲಕ ಅತಿಥಿಗಳಿಗೆ ಗೌರವ ಸಲ್ಲಿಸಿದರು.

ವಿದ್ಯಾರ್ಥಿನಿಯರಾದ ಅನನ್ಯಾ, ಸಮನ್ವಿಕಾ, ಶ್ರೀದೇವಿ, ಸೃಷ್ಠಿ ಮತ್ತು ನಿರೀಕ್ಷಾ ಪ್ರಾರ್ಥಿಸಿದರು. ಮುಖ್ಯ ಸಲಹೆಗಾರರಾದ ಸುಚಿತ್ರಾ ಪ್ರಭು ಸ್ವಾಗತಿಸಿ, ಬಪ್ಪಳಿಗೆ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್.  ವಂದಿಸಿದರು. ಉಪನ್ಯಾಸಕಿ ಸೌಮ್ಯಾ ಕೆ. ಎಸ್. ಅತಿಥಿಗಳ ಪರಿಚಯ ಮಾಡಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಯಶಸ್ಸು ನಮ್ಮ ಆಯ್ಕೆ, ಅವಕಾಶವಲ್ಲ: ಡಾ.ಎಂ.ಎಸ್.ಮೂಡಿತ್ತಾಯ | ಅಂಬಿಕಾ ಪ.ಪೂ.ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ 2025-26

ಪುತ್ತೂರು: ಪ್ರಪಂಚದ ನೂರ ತೊಂಬತ್ತಮೂರಕ್ಕೂ ಹೆಚ್ಚಿನ ರಾಷ್ಟ್ರಗಳ ಮಧ್ಯೆ ಭಾರತ ನಿರ್ಲಕ್ಷಿಸಲಾಗದ…