ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ನೇ ಶೈಕ್ಷಣಿಕ ಸಾಲಿನ ವಿವಿಧ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಕ್ಟೋಬರ್ 15ರೊಳಗೆ ಅರ್ಜಿ ಸಲ್ಲಿಸಬಹುದು.
ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಬಿಎ, ಬಿ.ಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯೂ, బి.లిబో ఐఎస్సి, ఎంఎ, ఎం,శాం, ఎంబిఎ, ఎంసిఎ, ಎಂಎಸ್ಸಿ, ಎಂಎಸ್‌ಡಬ್ಲ್ಯೂ, ಎಂ.ಲಿಬ್ ಐಎಸ್‌ಸಿ, ಪಿ.ಜಿ. ಸರ್ಟಿಫಿಕೇಟ್ ಪ್ರೊಗ್ರಾಮ್, ಡಿಪ್ಲೊಮಾ ಪ್ರೊಗ್ರಾಮ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ.
ಅಭ್ಯರ್ಥಿಗಳು ವಿವಿಯ ವೆಬ್‌ಸೈಟ್ www.ksoumysuru.ac.in ಪೋರ್ಟಲ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ವಿವಿಯ ರಾಮನಗರ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ರಾಮನಗರ ಪ್ರಾದೇಶಿಕ ಕೇಂದ್ರ, ನಂ. 103, ‘ಇ’ ಬ್ಲಾಕ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಬಿ.ಎಂ.ರಸ್ತೆ, ವಿವೇಕಾನಂದನಗರ, ರಾಮನಗರ-562159. ಮೊಬೈಲ್ :-9448668880, 8861732487, 8618501602, 9743184848 8 9900356226 ಸಂಪರ್ಕಿಸಬೇಕು ಎಂದು ವಿವಿಯ ಪ್ರಾದೇಶಿಕ ನಿರ್ದೇಶಕ ಗಿರೀಶ ಎಚ್.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.