Gl harusha
ಶಿಕ್ಷಣ

ಅಕ್ಷಯ ಕಾಲೇಜು: ಎನ್.ಎಸ್.ಎಸ್ ಸ್ವಯಂ ಸೇವಕಿ ವರ್ಷಿಣಿ.ಎಸ್  ಗೆ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪ್ರಶಸ್ತಿ

ಮೈಸೂರು ವಿಶ್ವವಿದ್ಯಾನಿಲಯ,ರಾಷ್ಟೀಯ ಸೇವಾ ಯೋಜನೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ  ಇವರ ಸಹಯೋಗದೊಂದಿಗೆ ಎನ್.ಎಸ್.ಎಸ್ ಭವನ ಸಾಹುಕಾರ್ ಚೆನ್ನಯ್ಯ ರಸ್ತೆ , ಸರಸ್ವಿತಿಪುರಂ , ಮೈಸೂರು ಇಲ್ಲಿ ಮಾರ್ಚ್.17 ರಿಂದ ಮಾರ್ಚ್.21 ರವರೆಗೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು ವಿಶ್ವವಿದ್ಯಾನಿಲಯ,ರಾಷ್ಟೀಯ ಸೇವಾ ಯೋಜನೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ  ಇವರ ಸಹಯೋಗದೊಂದಿಗೆ ಎನ್.ಎಸ್.ಎಸ್ ಭವನ ಸಾಹುಕಾರ್ ಚೆನ್ನಯ್ಯ ರಸ್ತೆ , ಸರಸ್ವಿತಿಪುರಂ , ಮೈಸೂರು ಇಲ್ಲಿ ಮಾರ್ಚ್.17 ರಿಂದ ಮಾರ್ಚ್.21 ರವರೆಗೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕಿ ವರ್ಷಿಣಿ.ಎಸ್ ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಿ ಯುವಜನೋತ್ಸವದಲ್ಲಿ ನಡೆದ ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ, ಸಾಮೂಹಿಕ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ  ಹಾಗೂ ಕಿರುನಾಟಕ  ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಜೊತೆಗೆ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಸಮಗ್ರ ಪ್ರಶಸ್ತಿ ಪಡೆದಿದೆ.

srk ladders
Pashupathi
Muliya

ವರ್ಷಿಣಿ.ಎಸ್  ಇವರು ಎನ್ .ಸುರೇಶ್ ಆಚಾರ್ಯ ಹಾಗೂ ವಾಣಿ .ಎ ದಂಪತಿಗಳ ಪುತ್ರಿ. ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಜಯಂತ್ ನಡುಬೈಲು, ಪ್ರಾಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿಗಳಾದ ಅರ್ಪಿತ್ ಟಿ. ಎ, ಮಂಗಳೂರು ವಿ.ವಿ ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳಾದ ಡಾ.ಶೇಷಪ್ಪ .ಕೆ ಹಾಗೂ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಕಿಶೋರ್ ಕುಮಾರ್ ರೈ, ಮೇಘಶ್ರೀ ಹಾಗೂ ಬೋಧಕ- ಭೋದಕೇತರರು, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts