Friday, November 22
Share News

ಪುತ್ತೂರು: ಹತ್ತೂರು ಖ್ಯಾತಿ ಪಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಆಗಮಿಸುವವರು ಈ ಸುದ್ದಿಯನ್ನು ತಪ್ಪದೇ ಓದಬೇಕು.

ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಸಭ್ಯ ವಸ್ತ್ರಗಳನ್ನು ಧರಿಸಿ ಬರುವಂತೆ ದೇವಸ್ಥಾನದ ವತಿಯಿಂದ ಫಲಕ ಅಳವಡಿಸಲಾಗಿದೆ. ಅಲ್ಲದೇ ಭಕ್ತಾಧಿಗಳು ಸಭ್ಯ ವಸ್ತ್ರ ಧರಿಸಿ ದೇಗುಲದ ಅವರಣ ಪ್ರವೇಶಿಸುವಂತೆ ದೇಗುಲದ ಸಿಬ್ಬಂದಿಗಳು ನೋಡಿಕೊಳ್ಳುವಂತೆಯೂ  ಸೂಚಿಸಲಾಗಿದೆ.

ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವಾಸಿಗರಿಂದ ಹೆಚ್ಚಾಗಿ ಸ್ಥಳೀಯರೇ ಆಗಮಿಸುತ್ತಿದ್ದು, ನಿತ್ಯ ಬಂದು ಹೋಗುವವರಲ್ಲಿ ಕೆಲವರು ಧರಿಸುವ ಉಡುಗೆ ತೊಡುಗೆಯ ಬಗ್ಗೆ ಈ ಹಿಂದೆ ಭಕ್ತ ವೃಂದ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ, ಭಕ್ತಾಧಿಗಳು ಸಭ್ಯ ವಸ್ತ್ರ ಧರಿಸುವುದನ್ನು ಖಾತರಿ ಪಡಿಸುವಂತೆ ದೇಗಲುದ ಆಡಳಿತವನ್ನು ಆಗ್ರಹಿಸಿತ್ತು.

ಈ ಹಿನ್ನಲೆಯಲ್ಲಿ ಸದ್ಯ ದೇವಸ್ಥಾನದ ಆಡಳಿತ ದೇವರ ದರ್ಶನಕ್ಕೆ ಬರುವಾಗ ಸಾಧ್ಯವಾದಷ್ಟು ಸ್ವಚ್ಛವಾದ ಶುದ್ಧವಾದ ಸಭ್ಯವಾದ ಉಡುಪುಗಳನ್ನು ಧರಿಸಿ ಬರುವಂತೆ ಸೂಚನೆಯ ಫಲಕವನ್ನು ದೇಗುಲದ ಅವರಣದಲ್ಲಿ ಅಳವಡಿಸಿದ್ದಾರೆ.


Share News

Comments are closed.

Exit mobile version