Thursday, November 14
Share News

ಪುತ್ತೂರು: ನವಂಬರ 13 ರಂದು ತುಳಸಿ ಪೂಜೆಯ ದಿನ ರಾಜ್ಯಾದ್ಯಂತ ಪ್ರತಿ ಮನೆಗಳಲ್ಲಿ ತಾಯಂದಿರು ಏಕಕಾಲದಲ್ಲಿ ಮನೆಯವರೊಂದಿಗೆ ಸಾಯಂಕಾಲ ತುಳಸಿ ಗಿಡಕ್ಕೆ ಹೂವಿಟ್ಟು ಆರತಿ ಎತ್ತುವ ಮೂಲಕ ಸರಳವಾಗಿ ತುಳಸಿ ಪೂಜೆ ಮಾಡುಬೇಕೆನ್ನುವ ರಾಜ್ಯ ದೇವಾಲಯಗಳ ಸಂವರ್ಧನಾ ಸಮಿತಿ ಯೋಚನೆಯ ಅನುಷ್ಠಾನ ಇಡೇರಿಕೆಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಾಲಯಗಳ ಸಂವರ್ದನ ಸಮಿತಿಯ ಪ್ರಮುಖರು ವಿಶೇಷ ಪ್ರಾಥನೆ ಸಲ್ಲಿಸಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ನಿಕಟಪೂರ್ವ ಅಧ್ಯಕ್ಷ, ದೇವಾಲಯಗಳ ಸಂವರ್ಧನಾ ಸಮಿತಿಯ ಮಂಗಳೂರು ವಿಭಾಗ ಪ್ರಮುಖ್ ಕೇಶವ ಭಟ್ ಮುಳಿಯ, ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ್ ಸುಳ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿಕಟ ಪೂರ್ವ ವ್ಯವಸ್ಥಾಪನ ಸಮಿತಿ ಸದಸ್ಯ, ದೇವಾಲಯಗಳ ಸಂವರ್ಧನಾ ಸಮಿತಿಯ ವಿಭಾಗ ಸಂಯೋಜಕ ಪ್ರಸನ್ನ ದರ್ಬೆ, ಕೊಯಿಲ ಗ್ರಾಮದ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿಅಧ್ಯಕ್ಷ, ದೇವಲಯಗಳ ಸಂವರ್ಧನಾ ಸಮಿತಿ ಸದಸ್ಯ ಯದುಶ್ರೀ ಆನೆಗುಂಡಿ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಮಾತಾಡಿದ ಕೇಶವ ಭಟ್ ಮುಳಿಯ, ನಮ್ಮ ಸಂಸ್ಕತಿಯ ಆಚರಣೆಗಳು ಮಾಯವಾಗುತ್ತಾ, ಪಾಶ್ಚಾತ್ಯ ಸಂಸ್ಕತಿಗಳ ಕಡೆ ಮುಖ ಮಾಡುವ ಈ ಸಂದರ್ಭಗಳಲ್ಲಿ ಹಿಂದುಗಳ ಪ್ರತಿ ಮನೆಯಲ್ಲಿ ಮಕ್ಕಳಲ್ಲಿ ಧಾರ್ಮಿಕತೆಯ ಅರಿವು ಮೂಡಿಸಲು ನಮ್ಮ ಧರ್ಮ ನಮ್ಮ ರಕ್ಷಣೆಯ ಅಡಿಯಲ್ಲಿ ಕಳೆದ ವರ್ಷ ಕಡಬ ತಾಲೂಕಿನ ಕೊಯಿಲ ಗ್ರಾಮದ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಗ್ರಾಮದ ಪ್ರತಿ ಮನೆಗಳಲ್ಲಿ ಮಕ್ಕಳಿಂದ ಶಾರದ ಪೂಜೆ ಹಾಗು ಮಾತೆಯರಿಂದ ತುಳಸಿ ಪೂಜೆ ನಡೆಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ಮನೆಗಳಲ್ಲಿ ಮಾತೆಯರಿಂದ ತುಳಸಿ ಪೂಜೆ ಜರಗಬೇಕು ಎನ್ನುವ ಅಪೇಕ್ಷೆ ನಮ್ಮದು. ಹಿಂದು ಧರ್ಮದ ಪೂಜನಿಯ ಅಸ್ಮಿತೆಗಳು ಪ್ರತೀ ಮನೆಯಲ್ಲಿ ನೆಲೆ ನಿಲ್ಲುವಂತಾಗಲಿ, ನಮ್ಮ ಧರ್ಮ ನಮ್ಮಿಂದ ರಕ್ಷಣೆ ಆಗಲಿ, ಎಲ್ಲಾ ಮನೆಯವರು ನಮ್ಮ ಯೋಜನೆಯನ್ನು ಪ್ರೋತ್ಸಾಹಿಸಬೇಕೆಂದು ದೇವರಲ್ಲಿ ಪ್ರಾಥನೆ ಸಲ್ಲಿಸಲಾಗಿದೆ ಎಂದರು.


Share News

Comments are closed.

Exit mobile version