ಕರಾವಳಿ

ನ. 28-30: ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ

ರೋಟರಿ ಪುತ್ತೂರು ಎಲೈಟ್ ಹಾಗೂ ನಿರತ ನಿರಂತ ಬಹುವಚನಂ ಆಶ್ರಯದಲ್ಲಿ ಅಟ್ಟಾಮುಟ್ಟಾ ಮಕ್ಕಳ‌ ನಾಟಕೋತ್ಸವವು ನ.28 ರಿಂದ 30 ರ ವರೆಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಹಾಗೂ ನಿರತ ನಿರಂತ ಬಹುವಚನಂ ಆಶ್ರಯದಲ್ಲಿ ಅಟ್ಟಾಮುಟ್ಟಾ ಮಕ್ಕಳ‌ ನಾಟಕೋತ್ಸವವು ನ.28 ರಿಂದ 30 ರ ವರೆಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ.
ನ.28 ರ ಗುರುವಾರ ಸಂಜೆ ಸಾಗರದ ಕಿನ್ನರ ಮೇಳ ತುಮರಿ ತಂಡದಿಂದ “ಇರುವೆ ಪುರಾಣ” ನಾಟಕ ಪ್ರದರ್ಶಗೊಳ್ಳಲಿದೆ. ನ.29 ರ ಶುಕ್ರವಾರ ರಂಗಾಯಣ ಕಲಾವಿದ ರಾಕೇಶ್ ಆಚಾರ್ಯ ನಿರ್ದೇಶನದಲ್ಲಿ ವೀರಮಂಗಲ ಪಿಎಂ ಶ್ರೀ ಸರ್ಕಾರಿ ಹಿ.ಪ್ರಾ. ಶಾಲಾ ಮಕ್ಕಳಿಂದ “ರಂಗಗೀತೆಗಳ ಗಾಯನ” ಕಾರ್ಯಕ್ರಮ, 7 ಗಂಟೆಯಿಂದ ಕೊಂಬೆಟ್ಟು ಪ್ರೌಢಶಾಲೆಯ ನಡೆನುಡಿ ಮಕ್ಕಳ ಸಾಂಗತ್ಯ ತಂಡದಿಂದ ಐಕೆ ಬೊಳುವಾರು ನಿರ್ದೇಶನದಲ್ಲಿ “ಕತ್ತೆ&ದೆವ್ವ” ನಾಟಕ ಪ್ರದರ್ಶನಗೊಳ್ಳಲಿದೆ.
ನ.30ರ ಶನಿವಾರ ಸಂಜೆ 6.30ಕ್ಕೆ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಂದ ಶಿವಗಿರಿ ಕಲ್ಲಡ್ಕ ನಿರ್ದೇಶನದ “ಬದುಕಿನ ಬೆಳಕು” ನಾಟಕ ಹಾಗೂ 7 ರಿಂದ ಮಾಣಿ‌ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ‌ ಶಾಲೆಯ ವಿದ್ಯಾರ್ಥಿಗಳಿಂದ ಮೌನೇಶ ವಿಶ್ವಕರ್ಮ‌ ನಿರ್ದೇಶನದ “ಯಂತ್ರಯಾನ” ನಾಟಕ ಪ್ರದರ್ಶನಗೊಳ್ಳಲಿದೆ.
ರಾತ್ರಿ 8 ಗಂಟೆಗೆ ರೋಟರಿ‌ ಪುತ್ತೂರು ಎಲೈಟ್ ಸದಸ್ಯರಿಂದ‌ ಮೌನೇಶ ವಿಶ್ವಕರ್ಮ‌ ನಿರ್ದೇಶನದ “ಓ ಮುನ್ನಾ” ನಾಟಕ ಪ್ರದರ್ಶನವಾಗಲಿದೆ. ರಂಗಾಸಕ್ತರು ಈ ನಾಟಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ‌ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ರಂಗಕರ್ಮಿ ಐಕೆ ಬೊಳುವಾರು, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ‌ ವಿನಂತಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…