ಪುತ್ತೂರು: ಪುತ್ತೂರಿನ ಯುವ ನ್ಯಾಯವಾದಿ ಇಬ್ರಾಹಿಂ ಬಾತಿಷಾ ಯು.ಕೆ.ಅವರು ಸಹಾಯಕ ಸರಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದಾರೆ.
ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಸಹಾಯಕ ಸರಕಾರಿ ಅಭಿಯೋಜಕರ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಇವರು ತೇರ್ಗಡೆ ಹೊಂದಿ ಸಹಾಯಕ ಸರಕಾರಿ ಅಭಿಯೋಜಕರಾಗಿ ನೇಮಕವಾಗಿದ್ದಾರೆ.
ಇವರನ್ನು ಮಂಗಳೂರು 7ನೇ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರಾಗಿ ನೇಮಕಗೊಳಿಸಿ ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ನಿರ್ದೇಶಕರಾದ ಅಂಜಲಿ ದೇವಿಯವರು ಆದೇಶಿಸಿದ್ದಾರೆ.
ಪ್ರಸ್ತುತ ಹಿರಿಯ ನ್ಯಾಯವಾದಿ ಕೆ.ಎಂ.ಸಿದ್ದೀಕ್ ಅವರ ಕಚೇರಿಯಲ್ಲಿ ಕಿರಿಯ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಇಬ್ರಾಹಿಂ ಬಾತಿಷಾ ಯು.ಕೆ.ರವರು ಉಪ್ಪಿನಂಗಡಿಯ ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ತಾಲೂಕು ಬೋರ್ಡ್ ಸದಸ್ಯ ಯು.ಕೆ.ಅಯ್ಯಬ್ ಮತ್ತು ಆಯಿಷಾ ದಂಪತಿಯ ಪುತ್ರ.