Gl
ಕರಾವಳಿ

125 ಸರಳೀಕರಣ ಮತ್ತು ಫ್ಲಾಟಿಂಗ್ ಸಮಸ್ಯೆ ಪರಿಹರಿಸಿ: ಕಂದಾಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಫ್ಲಾಟಿಂಗ್ ಮಾಡುವಲ್ಲಿ 125 (ಏಕವ್ಯಕ್ತಿ ಕೋರಿಕೆ) ರಲ್ಲಿ ಸರಳೀಕರಣ ಮಾಡಿ ಫ್ಯಾಟಿಂಗ್ ಸಮಸ್ಯೆಯನ್ನು ಪರಿಹರಿಸಬೇಕು ಎಂದ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಕಂದಾಯ ಇಲಾಖೆಯ ಆಯುಕ್ತರಾದ ಪೊಮ್ಮಲ ಸುನಿಲ್‌ಕುಮಾರ್ ಅವರಿಗೆ ಶಾಸಕರಾದ ಅಶೋಕ್ ರೈ ಅವರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಮತ್ತೂರು: ಫ್ಲಾಟಿಂಗ್ ಮಾಡುವಲ್ಲಿ 125 (ಏಕವ್ಯಕ್ತಿ ಕೋರಿಕೆ) ರಲ್ಲಿ ಸರಳೀಕರಣ ಮಾಡಿ ಫ್ಯಾಟಿಂಗ್ ಸಮಸ್ಯೆಯನ್ನು ಪರಿಹರಿಸಬೇಕು ಎಂದ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಕಂದಾಯ ಇಲಾಖೆಯ ಆಯುಕ್ತರಾದ ಪೊಮ್ಮಲ ಸುನಿಲ್‌ಕುಮಾರ್ ಅವರಿಗೆ ಶಾಸಕರಾದ ಅಶೋಕ್ ರೈ ಅವರು ಮನವಿ ಮಾಡಿದ್ದಾರೆ.

rachana_rai
Pashupathi
akshaya college
Balakrishna-gowda

ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಫ್ಲಾಟಿಂಗ್ ಮಾಡುವಲ್ಲಿ 125 ಕಡತ (ಏಕವ್ಯಕ್ತಿ ಕೋರಿಕೆಯನ್ನು ಸಲ್ಲಿಸಬೇಕಾಗುತ್ತದೆ. ಪ್ಲಾಟಿಂಗ್ ಮಾಡುವಲ್ಲಿ 125 ಕಡತಗಳನ್ನು ಸಿದ್ಧಪಡಿಸುವುದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ.ಈ ನಿಯಮದಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ೧೨೫ ಕಾರಣಕ್ಕೆ ಫ್ಲಾಟಿಂಗ್ ಮಾಡುವಲ್ಲಿ ಜನರು ಅಲೆದಾಟ ಮಾಡಬೇಕಾದ ಪರಿಸ್ತಿತಿ ಇದೆ. ಈ ನಿಯಮದಲ್ಲಿ ಸರಳೀಕರಣ ಮಾಡಿದಲ್ಲಿ ಫ್ಯಾಟಿಂಗ್ ಸಮಸ್ಯೆ ಬಹುತೇಕ ಇತ್ಯರ್ಥವಾಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಫ್ಯಾಟಿಂಗ್ ಕಡತಗಳು ಕಳೆದ ಹಲವು ವರ್ಷಗಳಿಂದ ಕಚೇರಿಯಲ್ಲೇ ಕೊಳೆಯುತ್ತಿದೆ. ಫ್ಲಾಟಿಂಗ್ ಆಗದೇ ಇರುವ ಕಾರಣ ಜನರು ಸಂಕಷ್ಟದಲ್ಲಿದ್ದು, ಮನೆ ಕಟ್ಟಲು, ಮಾರಾಟ ಮಾಡಲು ಮತ್ತು ಪಾಲು ಪಟ್ಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಸಚಿವರ ಮತ್ತು ಆಯುಕ್ತರ ಗಮನಕ್ಕೆ ತಂದಿದ್ದಾರೆ.

pashupathi

ಅಕ್ರಮ ಸಕ್ರಮ ಹಕ್ಕು ಪತ್ರ ಕೊಡಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು ಅವರಿಗೆ ಹಕ್ಕು ಪತ್ರವನ್ನು ನೀಡಿಲ್ಲ. ಹಕ್ಕು ಪತ್ರ ನೀಡದೇ ಇರುವ ಕಾರಣ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲು ಕಷ್ಟ ಸಾಧ್ಯವಾಗುತ್ತಿದ್ದು ಸರಕಾರ ತಕ್ಷಣ ವಿಲೇವಾರಿಯಾಗಿರುವ ಕಡತಗಳ ಹಕ್ಕುದಾರರಿಗೆ ಹಕ್ಕು ಪತ್ರವನ್ನು ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.

ಫ್ಲಾಟಿಂಗ್ ಮಾಡುವಲ್ಲಿ 125 ತೀವ್ರ ತೊಂದರೆ ನೀಡುತ್ತಿದ್ದು ಇದನ್ನು ಸರಳೀಕರಣ ಮಾಡಬೇಕು, ಸರಳೀಕರಣ ಮಾಡದೇ ಇದ್ದಲ್ಲಿ ಫ್ಲಾಟಿಂಗ್ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುತ್ತದೆ. ಕಳೆದ ಹಲವು ವರ್ಷಗಳಿಂದ ಸಾವಿರಾರು ಕಡತಗಳು ಕಚೇರಿಯಲ್ಲೇ ಕೊಳೆಯುತ್ತಿದೆ ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಚಿವ ಕೃಷ್ಣಬೈರೇಗೌಡ ಮತ್ತು ಕಂದಾಯ ಇಲಾಖೆಯ ಆಯುಕ್ತರ ಜೊತೆ ಮಾತನಾಡಿದ್ದೇನೆ. ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸರಳೀಕರಣವಾಗಿ ಬಾಕಿ ಇರುವ ಎಲ್ಲಾ ಫ್ಲಾಟಿಂಗ್ ಕಡತಗಳು ವಿಲೇವಾರಿಯಗುತ್ತದೆ ಎಂಬ ಪೂರ್ಣ ಭರವಸೆ ಇದೆ. ಅದೇ ರೀತಿ ವಿಲೇವಾರಿಯಾಗಿರುವ ಅಕ್ರಮ ಸಕ್ರಮ ಕಡತಗಳಿಗೆ ಹಕ್ಕು ಪತ್ರವನ್ನು ನೀಡುವಂತೆಯೂ ಮನವಿ ಮಾಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…