ಕರಾವಳಿ

ಫಿಲೋಮಿನಾ ಪ.ಪೂ ಕಾಲೇಜಿಗೆ ‘ಇಗ್ನೈಟ್  2K24’ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ನ8 ರಂದು ನಡೆದ 'ಇಗ್ರೆಟ್- 2K24' ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ನ:8ರಂದು ನಡೆದ  ಇಗ್ನೈಟ್- 2K24′ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸೃದ್ಧನ್ ಆಳ್ವ ಕೆ ಹಾಗೂ ಅರುಣ್ ನೋಯೆಲ್ ಡಿ ಸೋಜಾ ಬಿಜ್ – ಕ್ವಿಜ್ ಮತ್ತು ಸೆಲ್‌&ಶೈನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದ ಜೊತೆಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಸಕೀನ ಐಮನ್ ಮತ್ತು ಧನ್ವಿನ್ ಕೆ ಬ್ಯಾಲೆನ್ಸ್ ಶೀಟ್ ಬಟಲ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಸೆಲ್‌&ಶೈನ್ ನಲ್ಲಿ ದ್ವಿತೀಯ, ದೀಪಾ ನಾಯಕ್ ಹಾಗೂ ಯೂಸುಫ್ ಝಿಯನ್ ನ್ಯೂಸ್ ಹಂಟ್ ಲ್ಲಿ ಪ್ರಥಮ, ಸೃದ್ಧನ್ ಆಳ್ವ ಕೆ ಮತ್ತು ದೀಪಾ ನಾಯಕ್ ಬ್ಯಾಲೆನ್ಸ್ ಶೀಟ್ ಬ್ಯಾಟಲ್ ಲ್ಲಿ ದ್ವಿತೀಯ ಸ್ಥಾನ ಹಾಗೂ ವಿಜ್ಞಾನ ವಿಭಾಗದಲ್ಲಿ

ಫಲಕ್ ಮತ್ತು ವಿಯೋನ ವೆಗಾಸ್ ವಿಜ್ಞಾನ ರಸಪ್ರಶ್ನೆ ಹಾಗೂ ಅಟೊಮಿಕ್ ಮೈಂಡ್ಸ್ ನಲ್ಲಿ ದ್ವಿತೀಯ, ಆಕಾಶ್ ಪಿ ಜೆ ಮತ್ತು ಸಮಹಿತ್ ಜೈನ್ ವಿಜ್ಞಾನ ರಸಪ್ರಶ್ನೆ ಮತ್ತು ಸಾಮಾನ್ಯ ರಸಪ್ರಶ್ನೆಯಲ್ಲಿ ಪ್ರಥಮ, ಜನರಲ್ ವಿಭಾಗದ ವಿಡಿಯೋ ಮೇಕಿಂಗ್ ಲ್ಲಿ ಯಶ್ವಿತ್,ಅಮೃತ್, ರೋಶಿನ್, ಆಕಾಶ್ ಪಿ ಜೆ, ಸಮಹಿತ್ ಜೈನ್ ಮತ್ತು ಸಲ್ಮಾನ್ ಪ್ರಥಮ, ಭರತನಾಟ್ಯದಲ್ಲಿ ದೀಪಾ ನಾಯಕ್ ಪ್ರಥಮ ಹಾಗೂ ವಿಶೇಷ ಪ್ರಶಸ್ತಿಯಾಗಿ ಪ್ರಥಮ ವಿಜ್ಞಾನ ವಿಭಾಗದ ಪ್ರಜೋಷ್ ಪಡೆದುಕೊಂಡಿರುತ್ತಾರೆ.

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ರಶ್ಮಿ ಪಿ ಎಸ್ ಹಾಗೂ ಭರತ್ ಜಿ. ಪೈ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…