ಕರಾವಳಿ

ಸ.ಹಿ‌.ಪ್ರಾ ಶಾಲೆ ಸಜಂಕಾಡಿಯಲ್ಲಿ “ನಮ್ಮ ನಡಿಗೆ ನಾಟಿ ವೈದ್ಯರ ಮನೆಯ ಕಡೆಗೆ ” ಕಾರ್ಯಕ್ರಮ 

ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ  'ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ "ಎಂಬ ವಿಭಿನ್ನ  ಕಾರ್ಯಕ್ರಮವು ಪಡುಮಲೆ ಪೂಜಾರಿ ಮೂಲೆಯ ವಿಶ್ವನಾಥ ಪೂಜಾರಿಯವರ ಮನೆಯಂಗಳದಲ್ಲಿ ನಡೆಯಿ

ಈ ಸುದ್ದಿಯನ್ನು ಶೇರ್ ಮಾಡಿ

ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ  ‘ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ “ಎಂಬ ವಿಭಿನ್ನ  ಕಾರ್ಯಕ್ರಮವು ಪಡುಮಲೆ ಪೂಜಾರಿ ಮೂಲೆಯ ವಿಶ್ವನಾಥ ಪೂಜಾರಿಯವರ ಮನೆಯಂಗಳದಲ್ಲಿ ನಡೆಯಿತು .ಕೆಂಪು ,ಸರ್ಪಸುತ್ತು ,ಪಕ್ಷವಾತ ,ಅಂಗವಿಕಲರಿಗೆ ಮದ್ದು ,ಕಿಡ್ನಿಸ್ಟೋನ್ ಮುಂತಾದ  ರೋಗಗಳಿಗೆ ಸುಮಾರು 40ವರುಷಗಳಿಂದ ಪರಂಪರೆಯಿಂದ ಬಂದಹ ನಾಟಿ ಔಷಧಿ ನೀಡುತ್ತಿರುವ  ವಿಶ್ವನಾಥ ಪೂಜಾರಿಯವರು  ವಿವಿಧ ಗಿಡಮೂಲಿಕೆಗಳೊಂದಿಗೆ ಮಾಹಿತಿ ನೀಡಿದರು .ಶಾಲಾ ಎಸ್ .ಡಿ.ಎಂ.ಸಿ ಅಧ್ಯಕ್ಷೆ  ಶ್ರೀಮತಿ ಯಶೋಧ ಅಧ್ಯಕ್ಷತೆ ವಹಿಸಿದ್ದರು . ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಕೆ ,ಎಸ್ ಡಿ ಎಂ ಸಿ ಉಪಾಧ್ಯಕ್ಷ ರಝಾಕ್ , ಹಿರಿಯ ಶಿಕ್ಷಕಿ ಶಶಿಕಲಾ ,ಪೋಷಕರಾದ ಬಾಬು,ಅಡುಗೆ ಸಿಬ್ಬಂದಿ ಗಳಾದ ಸ್ಟೆಲ್ಲಾ ಮತ್ತು ಸೀತಾ  ಉಪಸ್ಥಿತರಿದ್ದರು .

ಶಾಲಾ ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಪ್ರಾಸ್ಥಾವಿಕ ಮಾತುಗಳನ್ನಾಡಿದರು .ಶಿಕ್ಷಕ  ಗಣೇಶ ನಾಯಕ್ ಪುತ್ತೂರು ಕಾರ್ಯನಿರೂಪಿಸಿದರು .

SRK Ladders

ಸನ್ಮಾನ : ಸುಮಾರು ನಲುವತ್ತು ವರುಷಗಳಿಂದ ವಿವಿಧ ರೋಗಗಳಿಗೆ ಪರಂಪರಾಗತ ನಾಟಿ ಔಷಧಿ ನೀಡುತ್ತಿರುವ ವಿಶ್ವನಾಥ ಪೂಜಾರಿಯವರನ್ನು ಸನ್ಮಾನಿಸಲಾಯಿತು .


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…