Gl
ಕರಾವಳಿ

ಬೆಳ್ಳಾರೆ: ಪದವಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಭೆ; ಕಾಲೇಜಿನ ಧನಾತ್ಮಕ ಚಟುವಟಿಕೆಗಳನ್ನು ಪರಿಚಯಿಸಲು ನವ ಮಾಧ್ಯಮಗಳ ಬಳಕೆ: ಹಿರಿಯ ವಿದ್ಯಾರ್ಥಿಗಳಿಂದ ಸಲಹೆ

ಬೆಳ್ಳಾರೆ ಡಾ|ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಹಿರಿಯ ವಿದ್ಯಾರ್ಥಿಗಳ ಸಭೆಯು ನ.8 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಾರೆ ಡಾ|ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಹಿರಿಯ ವಿದ್ಯಾರ್ಥಿಗಳ ಸಭೆಯು ನ.8 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 

rachana_rai
Pashupathi

ಕಾಲೇಜುನಲ್ಲಿ ಹತ್ತಾರು ಧನಾತ್ಮಕ ಚಟುವಟಿಕೆಗಳು ನಡೆಯುತ್ತಿದ್ದು ಅವು ಹೊರ ಜಗತ್ತಿಗೆ ಅಪರಿಚಿತವಾಗಿಯೇ ಉಳಿದಿದೆ. ಅವುಗಳನ್ನು ನವ ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯ ತುರ್ತಾಗಿ ಆಗಬೇಕು ಎಂಬ ಅಭಿಪ್ರಾಯ ಹಿರಿಯ ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.

akshaya college

ಹಿರಿಯ ವಿದ್ಯಾರ್ಥಿ ಮಹೇಶ್ ಕೆ.ಎನ್. ಅಭಿಪ್ರಾಯ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳು ಸಹಿತ ಮಾಧ್ಯಮಗಳ ಮೂಲಕ ಇಲ್ಲಿನ ಪಾಸಿಟಿವ್ ಸಂಗತಿಗಳನ್ನು ಹಂಚಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ಈ ಪ್ರಯತ್ನ ನಿರಂತರ ಚಟುವಟಿಕೆ ಆಗಬೇಕು. ಇಲ್ಲಿರುವ ಕೆಲ ಸೌಲಭ್ಯಗಳು, ಅವಕಾಶಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವು ಎಲ್ಲರಿಗೂ ತಲುಪಲು ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಕೊಂಡಿಯಾಗಿ ಕೆಲಸ ಮಾಡಬೇಕು. ಫೇಸ್‌ಬುಕ್‌, ವಾಟ್ಸಫ್, ಇನ್ಸ್ಟಾಗ್ರಾಂ ಮೊದಲಾದವುಗಳ ಸದ್ಭಳಕೆ ಆಗಬೇಕು ಎಂದವರು ಸಲಹೆ ನೀಡಿದರು.

ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಉದ್ಯೋಗಕ್ಕೆ ಪೂರಕವಾಗಿ ಹತ್ತಾರು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿವೆ. ಇದಕ್ಕೆ ಬೇಕಾದ ತರಬೇತಿಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡುವ ಬಗ್ಗೆ ನಾವು ಯೋಜನೆ ರೂಪಿಸಬಹುದು ಎಂದು‌ ಮಹೇಶ್ ಅಭಿಪ್ರಾಯಿಸಿದರು.

ಹಿರಿಯ ವಿದ್ಯಾರ್ಥಿನಿ ಗೌತಮಿ‌ ಕೆ ಮಾತನಾಡಿ, ಪ್ರಚಾರ ಅತಿ ಅಗತ್ಯ ಅನ್ನುವ ಕಾಲಘಟ್ಟ ಇದು. ಈ ಕಾಲದಲ್ಲಿ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಅತ್ಯಂತ ಬೇಡಿಕೆಯುಳ್ಳ ವಿಧಾನ ನವ ಮಾಧ್ಯಮವೇ ಆಗಿದೆ. ಕಾಲೇಜಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ತಾಲೂಕು ವ್ಯಾಪ್ತಿಯಲ್ಲಿ ಕಾಲೇಜಿನ ಚಟುವಟಿಕೆಗಳನ್ನು ಪ್ರಚುರಪಡಿಸಲು ಸಾಮಾಜಿಕ ಮಾಧ್ಯಮ, ಸ್ಥಳೀಯ ಪತ್ರಿಕೆ, ದೃಶ್ಯ, ನವ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಈಗಿನ ಸಾಮಾಜಿಕ ಜಾಲತಾಣಗಳು‌ ಮಹತ್ವದ ತೀರಾ ಸ್ಥಳೀಯ ಅಥವಾ ಬೇರುಮಟ್ಟದ ಸುದ್ದಿ, ಬೆಳವಣಿಗೆಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುತ್ತಿದ್ದು ಕಾಲೇಜಿನ ಬೆಳವಣಿಗೆಗೆ ಪೂರಕವಾಗಿ  ಮಾಧ್ಯಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಹಿರಿಯ ವಿದ್ಯಾರ್ಥಿ ಭಾಸ್ಕರ ಕೋಟ್ಯಾನ್ ಮಾತನಾಡಿ, 34 ವರ್ಷಗಳ ಇತಿಹಾಸ ಇರುವ ಬೆಳ್ಳಾರೆ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಂಖ್ಯಾ ಬಲ ಹೆಚ್ಚಳದ ಬಗ್ಗೆ ಆದ್ಯತೆ ನೀಡಬೇಕು. ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೆಲಸಕ್ಕೆ ಒತ್ತು ನೀಡಬೇಕು. ಇಲ್ಲಿ ಕಲಿತ ಪ್ರತಿ ವಿದ್ಯಾರ್ಥಿಗಳಿಗೂ ಇದು ನಮ್ಮ ಕಾಲೇಜು ಎಂಬ ಅಭಿಮಾನ ಇದ್ದೆ ಇರುತ್ತದೆ. ಅವರು ಕಾಲೇಜಿನ ಅಭಿವೃದ್ಧಿಗೆ ಸಹಕಾರ ನೀಡುತ್ತಾರೆ. ಹಾಗಾಗಿ ನಾವು ಕೊರತೆಗಳ ಬಗ್ಗೆ ಯೋಚಿಸದೆ, ಪಾಸಿಟಿವ್ ನೆಲೆಯಲ್ಲಿ ಕಾಲೇಜಿನ ಬೆಳವಣಿಗೆಗೆ ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬಗ್ಗೆ ಕಾರ್ಯಪ್ರವೃತರಾದರೆ ಉತ್ತಮ ಎಂದರು.

ಪಿಯುಸಿ ವಿದ್ಯಾರ್ಥಿಗಳಿಗೆ ಫೆಸ್ಟ್ ಆಯೋಜಿಸುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು  ನಿರ್ಧರಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಕುಮಾರ್ ಪೆರುವಾಜೆ, ಕೋಶಾಧಿಕಾರಿ ಯಶೋಧಾ ಪೆರುವಾಜೆ, ಉಪಾಧ್ಯಕ್ಷ ರಜನೀಶ್ ಸವಣೂರು ಮೊದಲಾದವರು ಸಲಹೆ ಸೂಚನೆ ನೀಡಿದರು. 

ಕಾಲೇಜಿನ ಪ್ರಾಂಶುಪಾಲ ಪ್ರೋ. ಬಾಲಸುಬ್ರಹ್ಮಣ್ಯ ಪಿ.ಎಸ್., ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಗಿರೀಶ್ ಸಿ.ಆರ್., ಬ್ರಿಜೇಶ್ ರೈ, ಶಿವಪ್ರಸಾದ್ ಪೆರುವಾಜೆ, ಡಾ.ಸಂದೀಪ್ ಕುಮಾರ್, ಶಿಲ್ಪ ಕೆ.ಎನ್., ಪುನೀತ ಎಂ.ಎಸ್., ದೀಕ್ಷಿತ್ ಆಚಾರ್ಯ ಎಂ., ರಂಜಿತ್ ಡಿ.ಯು., ವಾಸುದೇವ ಪೆರುವಾಜೆ, ದೇವಿಪ್ರಸಾದ್ ಕೆ, ಸನತ್ ಪೆರುವಾಜೆ, ರಂಜಿತ್ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನುರಾಜ್ ಸಿ.ಬಿ.ಸ್ವಾಗತಿಸಿ, ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ದ.ಕ. ಎಸ್ಪಿ, ಕಮೀಷನರ್ ವರ್ಗಾವಣೆ!! ಪವರ್’ಫುಲ್ ಅಧಿಕಾರಿಗಳ ಎಂಟ್ರಿ – ಎಸ್ಪಿಯಾಗಿ ಅರುಣ್ ಕುಮಾರ್, ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ!

ಕೋಮು ದ್ವೇಷದಿಂದ ದಹದಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು…

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…