ಕರಾವಳಿ

ಕರಾವಳಿ ಅಭಿವೃದ್ಧಿಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಲಹೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಚೆನ್ನೈ–ಬೆಂಗಳೂರು ಹಾಗೂ ಹೈದರಾಬಾದ್–ಬೆಂಗಳೂರು ಕೈಗಾರಿಕಾ ಕಾರಿಡಾರ್ ಮಾದರಿಯಲ್ಲೇ ಬೆಂಗಳೂರಿನಿಂದ ಮಂಗಳೂರಿನವರೆಗೆ ಕಾರಿಡಾರ್ ವಿಸ್ತರಣೆ ಮಾಡುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿ ಸಲಹೆ ನೀಡಿದರು.

chennai-shopping
maithri

ಮಂಗಳೂರು ಪ್ರಮುಖ ಬಂದರಾಗಿರುವುದರಿಂದ, ಈ ವಿಸ್ತರಣೆ ಆಮದು-ರಫ್ತು ಚಟುವಟಿಕೆಗಳಿಗೆ ಉತ್ತೇಜನ ನೀಡಿ ಕರಾವಳಿ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಬೆಳೆಗಳಿಗೆ ರಾಷ್ಟ್ರೀಯ ಮಂಡಳಿ ರಚನೆಗೆ ಮನವಿ

ಬಿಹಾರದ ‘ಮಖಾನಾ ಮಂಡಳಿ’ ಮಾದರಿಯಲ್ಲಿ ದಕ್ಷಿಣ ಭಾರತದ ಹಲಸು, ಹುಣಸೆ ಮತ್ತು ನೇರಳೆ ಬೆಳೆಗಳಿಗೆ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ರಚಿಸಬೇಕು ಎಂದು ದೇವೇಗೌಡರು ಮನವಿ ಮಾಡಿದರು. ಈ ಬೆಳೆಗಳು ಔಷಧೀಯ ಗುಣಗಳನ್ನೂ ಹೊಂದಿದ್ದು, ಒಣಭೂಮಿಯಲ್ಲಿಯೂ ಬೆಳೆಯುವ ರೈತಸ್ನೇಹಿ ಬೆಳೆಗಳಾಗಿವೆ. ರೈತರಿಗೆ ಬೆಲೆ ಭದ್ರತೆ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts