ಕರಾವಳಿ

ಧರ್ಮಸ್ಥಳ – ಸೌತಡ್ಕ – ಬೆಳ್ತಂಗಡಿ ನಡುವೆ ರೈಲು ಸಂಪರ್ಕಕ್ಕೆ ಬೇಡಿಕೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಸೌತಡ್ಕ ಸೇರಿದಂತೆ ಹಲವು ಪ್ರವಾಸಿ ತಾಣಗಳಿರುವ ಬೆಳ್ತಂಗಡಿ ತಾಲೂಕಿಗೆ ರೈಲು ಸಂಪರ್ಕ ಬೇಕೆಂಬ ಬೇಡಿಕೆ ಮತ್ತೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

chennai-shopping
maithri

ಬೆಳ್ತಂಗಡಿ ತಾಲೂಕಿಗೆ ಇನ್ನೂ ನೇರ ರೈಲು ಸಂಪರ್ಕವಿಲ್ಲ. ಬಂಟ್ವಾಳವೇ ಸಮೀಪದ ಕೊನೆಯ ರೈಲು ನಿಲ್ದಾಣ. ಜನರು 40–50 ಕಿ.ಮೀ ದೂರ ರಸ್ತೆ ಮೂಲಕ ಪ್ರಯಾಣಿಸಬೇಕಾಗಿದೆ.

ಈ ಹಿಂದೆ ಸುಬ್ರಹ್ಮಣ್ಯ – ಧರ್ಮಸ್ಥಳ – ಕೊಲ್ಲೂರು ರೈಲು ಮಾರ್ಗದ ಸರ್ವೇ ನಡೆದರೂ, ಯೋಜನೆ ಕಡತದಲ್ಲೇ ಉಳಿದಿದೆ. ಈ ಮಾರ್ಗ ಜಾರಿಯಾದರೆ ಭಕ್ತರು, ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸಂಚಾರ ಸುಲಭವಾಗುವ ಜೊತೆಗೆ ವಾಣಿಜ್ಯ, ಕೃಷಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.

ಅರಣ್ಯ ವ್ಯಾಪ್ತಿ ಅಡ್ಡಿಯಾಗಿದ್ದರೂ, ಪರ್ಯಾಯ ಯೋಜನೆಯ ಮೂಲಕ ಈ ರೈಲು ಸಂಪರ್ಕ ಸಾಧ್ಯವೆಂಬ ಅಭಿಪ್ರಾಯವಿದೆ. ಬೆಳ್ತಂಗಡಿ ತಾಲೂಕಿಗೆ ರೈಲು ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರಿಂದ ಮತ್ತೆ ಒತ್ತಾಯ ಹೆಚ್ಚಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts