ಪುತ್ತೂರು: ವಿದ್ಯಾರ್ಥಿನಿ ಮಗು ಹಡೆದ ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣ ರಾವ್’ನಿಂದ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪ್ರಮುಖರು ಹಾಗೂ ಉತ್ತರ ಕನ್ನಡ ಮೂಲದ ಸ್ವಾಮೀಜಿಗಳು ಸಂತ್ರಸ್ತೆ ಮನೆಗೆ ಶುಕ್ರವಾರ ಭೇಟಿ ನೀಡಿದರು.
ಕಲಬುರ್ಗಿ ಮಿಶ್ವಕರ್ಮ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ಎರಡು ಕುಟುಂಬಗಳು ಒಂದಾಗಿ, ಯುವಕ ಯುವತಿ ಹಿಂದಿನ ರೀತಿಯ ಅನ್ಯೋನ್ಯತೆಯನ್ನು ಮುಂದಿನ ಜೀವನದಲ್ಲಿ ಕಾಣಬೇಕಾಗಿದೆ. ಕುಟುಂಬಕ್ಕೆ ಆಗಿರುವ ಅನ್ಯಾಯ ನ್ಯಾಯವಾಗಿ ಪರಿವರ್ತನೆ ಆಗಬೇಕಾಗಿದೆ. ಹುಟ್ಟಿದ ಮಗುವಿಗೆ ನ್ಯಾಯ ಸಿಗಬೇಕೆಂಬ ದೃಷ್ಠಿಯಿಂದ ಸಮಾಜದ ಜತೆಗೆ ಸ್ವಾಮೀಜಿಗಳು ಕುಟುಂಬದ ಜತೆಗೆ ನಿಂತಿದ್ದೇವೆ.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ವಿಶ್ವಕರ್ಮ ಮಾತನಾಡಿ, ರಾಜಿ ಮೂಲಕ ಇತ್ಯರ್ಥ ಮಾಡಲು ಮಧ್ಯಸ್ಥಿಕೆ ವಹಿಸುವ ನಿಟ್ಟಿನಲ್ಲಿ ಮುಖಂಡರನ್ನು ಕೇಳಿಕೊಳ್ಳಲಾಗಿದೆ. ತಂದೆ ತಾಯಿಗೆ ಮತ್ತೊಂಂದು ಸಾರಿ ಮನವಿಯನ್ನು ಮಾಡಿಕೊಳ್ಳುತ್ತೇನೆ. ಈ ರೀತಿಯಲ್ಲಿ ಹೋಗುವುದರಿಂದ ಸಾಧಿಸುವುದು ಏನೂ ಇಲ್ಲ. ನ್ಯಾಯಾಂಗ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ತುಂಬ ವರ್ಷ ಸೆರೆಮನೆ ವಾಸ ಮಾಡಬೇಕಾಗುತ್ತದೆ. ಯುವಕನ ಕುಟುಂಬ ಮಾತನಾಡುವುದಕ್ಕೆ ಅವಕಾಶ ನೀಡಿದರೆ ಕುದ್ದು ನಾನೇ ಬಂದು ಮಾತನಾಡುತ್ತೇನೆ ಎಂದು ತಿಳಿಸಿದರು.
ಕಲಬುರ್ಗಿ ಮೂರು ಜಾವದೀಶ್ವರ ಮಠದ ಶ್ರೀ ಪ್ರಣವ ನಿರಂಜನ ಸ್ವಾಮೀಜಿ, ಕೊಪ್ಪಳದ ಸರಸ್ವತಿ ಅಮ್ಮನವರ ಆಸ್ಥಾನದ ಶ್ರೀ ಗಣೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮೈಸೂರು ವಿಶ್ವಕರ್ಮ ಜಿಲ್ಲಾ ಸಂಘದ ಅಧ್ಯಕ್ಷ ರಿಷಿ ಆಚಾರ್ಯ, ಪುತ್ತೂರು ಪುರಸಭೆ ಮಾಜಿ ಸದಸ್ಯ ಸುರೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.