ಕರಾವಳಿ

ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ಮಹಿಳೆಯನ್ನು ಹುಡುಕಿ ಬಂದ ಪತಿ! ಜೊತೆಗೆ ಕರೆದೊಯ್ಯಲು ಬಂದವನಿಗೆ ಕಾದಿತ್ತು ನಿರಾಸೆ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಗೋಕರ್ಣದ ರಾಮೇಶ್ವರ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ನೋಡಲು ಬಂದ ರಷ್ಯಾ ಮಹಿಳೆಯ ಬಾಯ್ ಫ್ರೆಂಡ್ ಇಸ್ರೇಲ್ ನ ಡೋರ್ ಬರಿಗೈಯಲ್ಲಿ ವಾಪಾಸಾಗಿದ್ದಾನೆ.

core technologies

ಇಸ್ರೇಲ್ ಮೂಲದ ಡೋರ್ ಎಂಬಾತ ಗುಹೆಯಲ್ಲಿ ಪತ್ತೆಯಾಗಿದ್ದ ಇಬ್ಬರು ಮಕ್ಕಳು ಹಾಗೂ ಮಾಜಿ ಲಿವಿನ್ ಗೆಳತಿ ರಕ್ಷಣೆ ಸಂಬಂಧ ವಿಚಾರ ತಿಳಿದು ಭಾರತಕ್ಕೆ ಬಂದಿದ್ದ. ಹೀಗೆ ಬಂದ ಆತನಿಗೆ ಮಕ್ಕಳು ತುಮಕೂರಿನಲ್ಲಿರುವ ವಿಚಾರ ತಿಳಿದು ಗುರುವಾರ ಸಂಜೆ ಮಕ್ಕಳನ್ನು ನೋಡಲು ಬಂದಿದ್ದ. ಆದರೆ ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಎಫ್‌ ಡಿಸಿ ಸಿಬ್ಬಂದಿ ಹೇಳಿದ್ದರಿಂದ ಬರಿಗೈಯಲ್ಲಿ ವಾಪಾಸಾಗಿದ್ದಾನೆ.

akshaya college

ಮಕ್ಕಳಿಗೆ ನೀಡಲು ಗಿಫ್ಟ್ ನೊಂದಿಗೆ ಬಂದಿದ್ದ ಡೋರ್ ಗೆ ಅನುಮತಿ ನಿರಾಕರಿಸಿದ್ದರಿಂದ ದೂರದಿಂದಲೇ ಫಾರಿನ್ ಡಿಟೆನ್ಷನ್ ಸೆಂಟರ್ ನ ಕಿಟಕಿಯಲ್ಲಿ ಮಕ್ಕಳಿಗೆ ಹಾಯ್ ಹೇಳಿ ಬರಿಗೈನಲ್ಲಿ ವಾಪಾಸ್‌ ಆಗಿದ್ದಾನೆ.

ಈತನ ಮಾಜಿ ಲಿವಿನ್ ಗೆಳತಿ ನೀನಾಗೆ ಪ್ರಕೃತಿಯ ಮೇಲೆ ಪ್ರೀತಿಯಂತೆ. ಹೀಗಾಗಿಯೇ ಆಕೆ ಗೋಕರ್ಣದ ಗುಹೆಯಲ್ಲಿ ವಾಸವಿದ್ದಳು ಎನ್ನುತ್ತಾನೆ ಡೋ‌ರ್. ತನ್ನ ಮಕ್ಕಳನ್ನು ತನ್ನ ದೇಶಕ್ಕೆ ಕರೆದೊಯ್ಯುವ ಆಸೆ ಇದ್ದರೂ ಇಸ್ರೇಲ್ ನಲ್ಲಿ ಯುದ್ಧ ಕಾರಣದಿಂದ ಅದು ಸಾಧ್ಯವಾಗಿಲ್ಲ ಎನ್ನುತ್ತಾನೆ. ತಾಯಿ ಜೊತೆ ಮಕ್ಕಳಿರಬೇಕು ಎಂದ ಡೋ‌ರ್ ತಾಯಿ ಒಪ್ಪಿಗೆ ಇಲ್ಲದೆ ಮಕ್ಕಳನ್ನು ಕರೆದೊಯ್ಯುವುದಿಲ್ಲ ಎಂದಿದ್ದಾನೆ. ಅಲ್ಲದೇ ಮಕ್ಕಳ ಭೇಟಿಗೆ ಮತ್ತೆ ಪ್ರಯತ್ನಿಸುವುದಾಗಿ ತಿಳಿಸಿದ್ದಾನೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬ್ಬಂದಿ!

ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ…

ಅ. 26: ದ.ಕ. ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದಿಂದ ಪುತ್ತೂರಿನಲ್ಲಿ ಗಾಣಿಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಇದರ ವತಿಯಿಂದ ಪೆರ್ಣೆ…