Gl
ಕರಾವಳಿ

ಬ್ರಹ್ಮಾವರ: ತಾಲೂಕು ತುಳುವ ಮಹಾಸಭೆ ಸಂಚಾಲಕಿಯಾಗಿ ಆಶಾ ಎ. ಹೆಗ್ಡೆ ಮಂದಾರ್ತಿ ನೇಮಕ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ನೀರ್ಜೆಡ್ಡು ಮೂಲದ ಸಮಾಜ ಸೇವಕಿ ಶ್ರೀಮತಿ ಆಶಾ ಎ. ಹೆಗ್ಡೆ ಮಂದಾರ್ತಿ ಅವರನ್ನು ಬ್ರಹ್ಮಾವರ ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ನೀರ್ಜೆಡ್ಡು ಮೂಲದ ಸಮಾಜ ಸೇವಕಿ ಶ್ರೀಮತಿ ಆಶಾ ಎ. ಹೆಗ್ಡೆ ಮಂದಾರ್ತಿ ಅವರನ್ನು ಬ್ರಹ್ಮಾವರ ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ.

rachana_rai
Pashupathi
akshaya college

ಆಶಾ ಹೆಗ್ಡೆ ಅವರು ಭಂಡಾರ್ಕಸ್್ರ ಕಾಲೇಜಿನಲ್ಲಿ ಪದವಿ ಹಾಗೂ ಡಿ.ಎಂ.ಎಲ್.ಟಿ (DMLT) ಜೊತೆಗೆ ಪೂರ್ಣಗೊಳಿಸಿರುವವರು. ತಮ್ಮ ವೃತ್ತಿಜೀವನದಲ್ಲಿ ಅವರು ಆರೋಗ್ಯ ಕ್ಷೇತ್ರದಲ್ಲಿ ನಿಜವಾದ ಸೇವೆ ಸಲ್ಲಿಸುತ್ತಿದ್ದು, ಶ್ರೀದೇವಿ ಕ್ಲಿನಿಕಲ್‌ ಲ್ಯಾಬೋರೇಟರಿ ಸಾಲಿಗ್ರಾಮ, ಶ್ರೀದೇವಿ ಹೆಲ್ತ್ ಕೇರ್ ಮಂದಾರ್ತಿ, ಮತ್ತು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಮಂದಾರ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರಲ್ಲಿ ವಿಶೇಷವಾಗಿರುವುದು ಆರೋಗ್ಯ ಸೇವೆಯ ಜೊತೆಗೆ ಸಮಾಜಮುಖಿ ಸೇವೆಯನ್ನೂ ಸಮಾನವಾಗಿ ನಿರ್ವಹಿಸುತ್ತಿರುವುದಾಗಿದೆ. ಮಾನವ ಹಕ್ಕುಗಳು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಂಸ್ಥೆಯಲ್ಲಿ ಕರ್ನಾಟಕದ ಉಪಾಧ್ಯಕ್ಷೆ, ಸಹಕಾರ ಭಾರತೀಯ ಉಡುಪಿ ಜಿಲ್ಲಾ ಮಹಿಳಾ ಪ್ರಮುಖೆ, ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿಯ ನಿರ್ದೇಶಕಿ, ಹಾಗೂ ವಿವಿಧ ದೇವಸ್ಥಾನಗಳಲ್ಲಿ ಸದಸ್ಯೆಯಾಗಿ, ಗಣೇಶೋತ್ಸವದ ಗೌರವ ಸಲಹೆಗಾರೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಷ್ಟು ಪ್ರಾಮುಖ್ಯತೆಯದಾಗಿ, ಆಶಾ ಹೆಗ್ಡೆ ಅವರು ಜೀವ ವಿಮಾ ಕಂಪನಿಗಳ ಅನುಮೋದಿತ ವಿಮಾ ಏಜೆಂಟ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಮಾಜದ ವಿವಿಧತೆಯ ನಡುವೆ ತಮ್ಮ ಶ್ರಮ, ಸಾಮರ್ಥ್ಯ ಹಾಗೂ ಬದ್ಧತೆಯಿಂದ ಗುರುತಿಸಿಕೊಂಡಿರುವ ಆಶಾ ಹೆಗ್ಡೆ ಅವರು ತುಳು ಭಾಷೆ, ಸಂಸ್ಕೃತಿ ಹಾಗೂ ತಾಯ್ಕಾಡಿನ ಸೇವೆಯುಳ್ಳ ಕಾರ್ಯಗಳಲ್ಲಿ ತಮ್ಮ ಶಕ್ತಿ ಹಂಚಿಕೊಳ್ಳುವ ಆಶಯದಿಂದ ಬ್ರಹ್ಮಾವರ ತಾಲೂಕು ತುಳುವ ಮಹಾಸಭೆಯ ನೂತನ ಸಂಚಾಲಕಿಯಾಗಿ ನೇಮಕಗೊಂಡಿದ್ದಾರೆ

ತುಳುವ ಮಹಾಸಭೆ, 1928ರಲ್ಲಿ ಹಿರಿಯ ತಿಲಕವಾದಿ ಎಸ್‌. ಯು. ಪಣಿಯಾಡಿ ಅವರ ನೇತೃತ್ವದಲ್ಲಿ ಸ್ಥಾಪಿತವಾಗಿದ್ದು, ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತುಳುವರ ಹಕ್ಕುಗಳ ಸಂರಕ್ಷಣೆ ಮತ್ತು ಉದ್ದೇಶವನ್ನಾಗಿಸಿಕೊಂಡಿದೆ. ಪ್ರಚಾರವನ್ನು ತಮ್ಮ ಶತಮಾನೋತ್ಸವದ ಹೆಜ್ಜೆತ್ತುತ್ತಿರುವ ಈ ಮಹಾಸಭೆ ನೂತನ ಚೇತನದೊಂದಿಗೆ ಪುನಶ್ಚತನಗೊಳ್ಳುತ್ತಿದೆ.

ತುಳುನಾಡನ್ ಕಳರಿ ತರಬೇತಿ (ಸಮರಕಲೆ, ಮರ್ಮ ಚಿಕಿತ್ಸೆ), ನಶಿಸುತ್ತಿರುವ ದೈವ ಆರಾಧನೆಗಳ ಪುನರುಜ್ಜಿವನ, ತುಳುವೇಶ್ವರ ದೇವಾಲಯ ಪುನರ್ ಸ್ಥಾಪನೆ, ಭಾಷಾ-ಜಾತಿ-ಮತ ಸೌಹಾರ್ದತೆ, ಪರಿಸರ ಸಂರಕ್ಷಣೆಯಂತಹ ಹಲವಾರು ಕ್ಷೇತ್ರಗಳಲ್ಲಿ ಮಹಾಸಭೆ ಶ್ರಮಿಸುತ್ತಿದ್ದು, ಪ್ರತಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ದೇಶ-ವಿದೇಶಗಳಲ್ಲಿ ಕಾರ್ಯವಿಸ್ತರಣೆ ಮಾಡುತ್ತಿದೆ.

ಅಶಾ ಎ.ಹೆಗ್ಡೆ ಅವರ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ ತುಳು ಭಾಷಾ ಬೋಧನೆ, ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆ ಹಾಗೂ ಸಮುದಾಯದ ಸಂಘಟಿತ ಬಲವರ್ಧನೆಗೆ ನಿರೀಕ್ಷಿತ ಬೆಳವಣಿಗೆಗಳು ಸಂಭವಿಸಲಿವೆ ಎಂದು ಮಹಾಸಭೆಯ ಕೇಂದ್ರ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ. ರಾಜ್ಯ ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ತುಳುವ ಸಂಘಟನೆಗಳು ಅವರು ಹೊಸದಾಗಿ ಪಡೆದ ಪದವಿಗೆ ಅಭಿನಂದನೆ ಸಲ್ಲಿಸುತ್ತಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…

ದ.ಕ. ಎಸ್ಪಿ, ಕಮೀಷನರ್ ವರ್ಗಾವಣೆ!! ಪವರ್’ಫುಲ್ ಅಧಿಕಾರಿಗಳ ಎಂಟ್ರಿ – ಎಸ್ಪಿಯಾಗಿ ಅರುಣ್ ಕುಮಾರ್, ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ!

ಕೋಮು ದ್ವೇಷದಿಂದ ದಹದಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು…