Gl ugadhi
ಕರಾವಳಿ

ಪಿಲಿಕುಳ ಮೃಗಾಲಯ ತಾತ್ಕಾಲಿಕ ಬಂದ್?? ಹೈಕೋರ್ಟ್ ಮೊರೆ ಹೋದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ!

ಪಿಲಿಕುಳ ಜೈವಿಕ ಉದ್ಯಾನದಲ್ಲಿ ನಿರ್ವಹಣಾ ಅವ್ಯವಸ್ಥೆ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಅಲ್ಲಿರುವ ಪ್ರಾಣಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಹೈಕೋರ್ಟ್ ಮೊರೆ ಹೋಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

srk ladders
Pashupathi
Muliya

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸಂಸ್ಥೆ, ನ್ಯಾಯಾಲಯದ ತೀರ್ಪು ಹೊರಬರುವವರೆಗೆ ಪಿಲಿಕುಳ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಕೋರುತ್ತಿದೆ. ಈ ಕುರಿತಂತೆ, ಮಂಗಳೂರು ಮೂಲದ ವನ್ಯಜೀವಿ ಸಂರಕ್ಷಣಾ ತಜ್ಞ ಭುವನ್ ಮತ್ತು ಹೈಕೋರ್ಟ್ ವಕೀಲ ಅಶ್ವಿನ್ ಜಾಯ್‌ಸ್ಟನ್ ಕುಟಿನ್ಹ ಕಳೆದ ಅಕ್ಟೋಬರ್ 31 ರಂದು ಅಧ್ಯಯನ ನಡೆಸಿದ್ದರು.

ಪಿಲಿಕುಳ ಉದ್ಯಾನದಲ್ಲಿನ ಪ್ರಾಣಿಗಳ ಪಂಜರಗಳು ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮಾವಳಿಗಳಿಗೆ ಅನುಗುಣವಿದೆಯೇ ಎಂಬುದನ್ನು ಪರಿಶೀಲಿಸಿ, ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳಿದರೂ, ಸರಿಯಾದ ಮಾಹಿತಿ ದೊರಕಿಲ್ಲ.

ಈ ಕುರಿತು ಕೇಂದ್ರ ಮೃಗಾಲಯ ಪ್ರಾಧಿಕಾರ, ಮುಖ್ಯ ವನ್ಯಜೀವಿ ವಾರ್ಡನ್ ಮತ್ತು ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿದೆ ಎಂದು BNHS ಸಂಸ್ಥೆ ಪ್ರಕಟಣೆ ನೀಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು

ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ…