ನಿಧನ

ಪುಣಚ ನಿವಾಸಿ ನಿಶಿತ್ ರೈಲಿನಿಂದ ಬಿದ್ದು ಮೃತ್ಯು!! ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಬೆಂಗಳೂರಿನಿಂದ ಊರಿಗೆ ಮರಳುತ್ತಿದ್ದಾಗ ಘಟನೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುಣಚ ನಿವಾಸಿ ನಿಶಿತ್ ನಾಯ್ಕ್ (25 ವ.) ಮಂಗಳವಾರ ಮುಂಜಾನೆ ರೈಲಿನಿಂದ ಎಸೆಯಲ್ಪಟ್ಟು ಮೃತಪಟ್ಟಿರುವ ಬಗ್ಗೆ ಚೆನ್ನರಾಯಪಟ್ಟಣದಿಂದ ವರದಿಯಾಗಿದೆ.

chennai-shopping
maithri

ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್’ನಲ್ಲಿ ಉದ್ಯೋಗಿಯಾಗಿರುವ ನಿಶಿತ್ ಅವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ. ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು.

ಮನೆಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ಟ್ರೈನ್ ಹಿಡಿದಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು, ಸುಮಾರು 2.30ರ ಹೊತ್ತಿಗೆ ರೈಲಿನಿಂದ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತದೇಹ ಹಾಸನ ರೈಲ್ವೇ ಪೊಲೀಸರ ಸುಪರ್ಧಿಯಲ್ಲಿದೆ ಎಂದು ಹೇಳಲಾಗಿದೆ.

ಮೃತರ ತಂದೆ ನಿವೃತ್ತ ಸೈನಿಕರಾಗಿದ್ದು, ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts