ಪುತ್ತೂರು: ಪುತ್ತೂರಿನ ಹೆಬ್ಬಾರಬೈಲು ನಿವಾಸಿ ಹಾಗೂ ಹಿರಿಯ ಜವುಳಿ ವ್ಯಾಪಾರಿ ಹೆಚ್. ನಾರಾಯಣ ಅವರ ಪುತ್ರ ತಾರನಾಥ್ ಹೆಚ್. (49) ರವರು ಅಕ್ಟೋಬರ್ 13ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಆರಂಭದಲ್ಲಿ ತಂದೆ ಹಾಗೂ ಸಹೋದರರೊಂದಿಗೆ ಹೆಚ್. ನಾರಾಯಣ ಅಂಡ್ ಸನ್ಸ್ ಜವುಳಿ ಮಳಿಗೆಯಲ್ಲಿ ವ್ಯವಹಾರ ನಿರ್ವಹಿಸುತ್ತಿದ್ದ ಅವರು, ಇತ್ತೀಚಿನ ಕೆಲ ವರ್ಷಗಳಿಂದ ಪಿಗ್ನಿ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 13ರ ಸಂಜೆ ಎಂದಿನಂತೆ ಪಿಗ್ನಿ ಸಂಗ್ರಹಣೆಯ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಾಣ ಉಳಿಸಲ ಸಾಧ್ಯವಾಗಲಿಲ್ಲ.
ಮೃತರು ಪತ್ನಿ ಶಿಕ್ಷಕಿ ವಿನುತಾ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.