ನಿಧನ

ಉಳ್ಳಿಂಜ ಪಾರ್ವತಿ ಜಯರಾಮ್ ಭಟ್ ನಿಧನ!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದ ಉಳ್ಳಿoಜ ನಿವಾಸಿ ಕಾಕುಂಜೆ ಜಯರಾಮ್ ಭಟ್ ರವರ ಪತ್ನಿ ಉಳ್ಳಿಂಜ ಪಾರ್ವತಿ (61 ವ) ಜುಲೈ 28ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

akshaya college

ವೇಣೂರು ಮಹಿಳಾ ಮಂಡಲದ ಮಾಜಿ ಅಧ್ಯಕ್ಷರಾಗಿದ್ದು, ಹಲವಾರು ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿದ್ದರು. ಅಲ್ಲದೆ ಮದುವೆ ಮಕ್ಕಳ ವಧು ಸಿಂಗಾರ ಹಾಗೆ ಅಡಿಕೆ ಹಿಂಗಾರದ ಮಾಲೆ ಕುಸುರಿ ಕಲೆಯಾದ ಮಣಿ ಮಾಲೆ, ತೋರಣ, ವೈರ್ ಬ್ಯಾಗ್ ಶೃಂಗಾರ ಆಭರಣಗಳನ್ನು ತಯಾರಿಸುತ್ತಿದ್ದರು. ಕಲಾ ನಿರೂಪಕರು ಸಂಘದ ಚಟುವಟಿಕೆಯಲ್ಲಿ ಸಕ್ರಿಯ ರಾಗಿದ್ದರು.

ಮೃತರ ತಾಯಿ ಶಾರದಮ್ಮ ಪೆರ್ನಾಜೆ, ಪತಿ ಜಯರಾಮ್ ಭಟ್, ಪುತ್ರರಾದ ರವೀಂದ್ರ ಭಟ್ ಉಳ್ಳಿoಜ, ಸೊಸೆ ವಿನಯ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ರಘುನಂದನ ಉಳ್ಳಿಂಜ, ಸೊಸೆ ಕಾವ್ಯಶ್ರೀ, ಪುತ್ರಿ ರಮ್ಯಾ ಶ್ಯಾಮ್ ಉಡುಪಿ,
ಅಳಿಯ ವಿಜಯಶ್ಯಾಮ್ ಗುತ್ತು ಉಡುಪಿ, ಮೊಮ್ಮಕ್ಕಳಾದ ಚಿರಂತನ, ವೈಷ್ಣವಿ, ಪರ್ಜನ್ಯ ರಾಮ, ಹೃತಿಕ್ ಕೃಷ್ಣ , ಸ್ವದಾ, ಸಹೋದರರಾದ ಸತ್ಯನಾರಾಯಣ ಭಟ್ ಪಿಲ್ಯ ಪೆರ್ನಾಜೆ, ಜೇನು ತಜ್ಞ ಕುಮಾರ್ ಪೆರ್ನಾಜೆ, ಮುರುಡೇಶ್ವರ ಆರ್ ಎನ್ ಶೆಟ್ಟಿ ಕಾಲೇಜ್ ಉಪನ್ಯಾಸಕ ಕೃಷ್ಣ ಪ್ರಸಾದ್ ಪೆರ್ನಾಜೆ, ಸಹೋದರಿಯರಾದ ಸರಸ್ವತಿ ಪ್ರಕಾಶ್ ಕೋಟೆ ಸುಳ್ಯ, ಶಂಕರಿ ಬಾಲಕೃಷ್ಣ ಶರ್ಮ ಪುದುಕೋಳಿ ನಿರ್ಚಾಲು ಅವರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಶಾಲಾ ವಾಹನದ ಚಾಲಕನಿಗೆ ಹೃದಯಾಘಾತ: ಸಾವು| ವಿದ್ಯಾರ್ಥಿಗಳ ಪ್ರಾಣ ಉಳಿಸಿ ಸಮಯ ಪ್ರಜ್ಞೆ ಮೆರೆದ ಮೊಯ್ದಿನ್  ಬಾವ!!

ಮಣಿಪಾಲ: ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ…

ಬನ್ನೂರು ಶ್ರೀ ಶನೀಶ್ವರ ಸನ್ನಿಧಿ ಸಂಚಾಲಕ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಅವರಿಗೆ ಪಿತೃವಿಯೋಗ!

ಪುತ್ತೂರು: ಬನ್ನೂರು ಶ್ರೀ ಶನೀಶ್ವರ ಸನ್ನಿಧಿ ಸಂಚಾಲಕ, ಪುತ್ತೂರು ತಾಲೂಕು ಯುವಜನ ಒಕ್ಕೂಟದ…